Advertisement
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಗುರುವಾರ ನಡೆದ ಎಂಜಿಎಂ ಪ.ಪೂ. ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹದಿಹರೆಯದಲ್ಲಿ ಮೋಜು ಮಸ್ತಿಗೆ ಒಳಗಾಗದೆ ಕಷ್ಟ ಪಟ್ಟು ಓದಬೇಕು. ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದ್ದೇ ಇರುತ್ತದೆ ಎಂಬುದನ್ನು ವಿವೇಕಾನಂದರು ಬೆಟ್ಟು ಮಾಡಿದ್ದಾರೆ. ಸಕಾರಾತ್ಮಕ ಚಿಂತನೆ ಹೊಂದಿ ನಮ್ಮ ಭವಿಷ್ಯವನ್ನು ನಾವೇ ರೂಪಿಸಬೇಕು ಎಂದರು.
ಮೋಹನದಾಸ ಕರಮಚಂದ ಗಾಂಧಿ ಸತ್ಯ, ಅಹಿಂಸೆ, ತ್ಯಾಗ, ಪ್ರಾಮಾಣಿಕತೆ, ನಿಸ್ವಾರ್ಥಸೇವೆಯಿಂದ ಮಹಾತ್ಮನಾದರು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ, ಜ್ಞಾನಾರ್ಜನೆ ಮಾಡಬೇಕೆಂಬ ಇಚ್ಛೆಯೂ ಅಗತ್ಯ. ಜೀವನವೇ ಗುರು, ಭೂಮಿಯೇ ಶಾಲೆ. ಜೀವನ, ಪರಿಸರದ ಅನುಭವ ಗಳಿಸುತ್ತ ಸಾಧನೆಯತ್ತ ಮುಂದಾಗಬೇಕು. ಕಷ್ಟಪಟ್ಟರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಣಿಪಾಲದ ಡಾ| ಟಿಎಂಎ ಪೈಯವರೇ ಉದಾಹರಣೆ. ಹದಿಹರೆಯವನ್ನು ಸಮರ್ಥವಾಗಿ ಬಳಸಿಕೊಳ್ಳದೆ ಇದ್ದರೆ ಸಮಾಜಕ್ಕೂ ಹೆತ್ತವರಿಗೂ ಭಾರವಾಗುತ್ತೇವೆ. ಹದಿವಯಸ್ಸು ಭವಿಷ್ಯದ ಭದ್ರ ಬುನಾದಿ ನಿರ್ಮಿಸಲು ಸಕಾಲ ಎಂದು ರಾಜೇಶ್‌ಪ್ರಸಾದ್ ಹೇಳಿದರು.