Advertisement

4 ಪಟ್ಟು ಹೆಚ್ಚು ಆಕ್ಸಿಜನ್‌ ಕೇಳಿದ್ದ ಆಪ್‌ ಸರ್ಕಾರ!

07:00 PM Jun 26, 2021 | Team Udayavani |

ನವದೆಹಲಿ:ಕೊರೊನಾ2ನೇ ಅಲೆಯ ವೇಳೆ ದೆಹಲಿ ಸರ್ಕಾರವು ತನ್ನ “ಆಮ್ಲಜನಕದ ಅವಶ್ಯಕತೆ’ಯನ್ನು ಅಗತ್ಯಕ್ಕಿಂತ 4 ಪಟ್ಟು ಹೆಚ್ಚೇ ಹೇಳಿದ್ದು, ಇದರಿಂದಾಗಿ ಇತರೆ ರಾಜ್ಯಗಳಿಗೆ ಪೂರೈಕೆಯಾ ಗಬೇಕಿದ್ದ ಆಮ್ಲಜನಕದ ಪ್ರಮಾಣ ತಗ್ಗಿದಂತಾಯಿತು ಎಂಬ ವರದಿ ಯೊಂದು ಬಹಿರಂಗವಾಗಿದೆ. ಇದು ಕೇಂದ್ರ ಸರ್ಕಾರ ಮತ್ತು ಆಪ್‌ ನಡುವೆ ಹೊಸ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಿದೆ.

Advertisement

ಇದನ್ನೂ ಓದಿ:ಮಂಗಳೂರು : 354 kg ಮಾದಕ ವಸ್ತುಗಳನ್ನು ನಾಶ ಮಾಡಿದ ಪೊಲೀಸರು

ಇದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ ಆಡಿಟ್‌ ತಂಡದ ಮಧ್ಯಂತರ ವರದಿಯಲ್ಲಿನ ಅಂಶ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ. ಆದರೆ, ಇದನ್ನು ಸುಳ್ಳು ಮತ್ತು ಬಿಜೆಪಿಯ ದುರುದ್ದೇಶಪೂರಿತ ಪ್ರಚಾರ ಎಂದು ಹೇಳಿ ರುವ ದೆಹಲಿ ಡಿಸಿಎಂ ಮನೀಷ್‌ ಸಿಸೋಡಿಯಾ, “ಅಂಥ ದ್ದೊಂದು ವರದಿಯನ್ನು ನಾವು ಕೊಟ್ಟೇ ಇಲ್ಲ ಎಂದು ಆಡಿಟ್‌ ತಂಡದ ಸದಸ್ಯರೇ ಸ್ಪಷ್ಟಪಡಿಸಿದ್ದಾರೆ’ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ ಕ್ಷಮೆ ಕೇಳಲಿ: ದೆಹಲಿಗೆ ಬೇಕಾಗಿದ್ದು 300 ಮೆ. ಟನ್‌ ಆಕ್ಸಿಜನ್‌. ಆದರೆ, ಸರ್ಕಾರ 1200 ಮೆ.ಟನ್‌ಗೆ ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಅನುಗುಣವಾಗಿ ದೆಹಲಿಗೆ ಹೆಚ್ಚುವರಿ ಆಮ್ಲಜನಕ ಪೂರೈಸಲಾಗಿತ್ತು. ಇದರಿಂದಾಗಿ, ಆಕ್ಸಿಜನ್‌ನ ಅಗತ್ಯವಿದ್ದರೆ ಇತರೆ ರಾಜ್ಯಗಳಿಗೆ ಸಮಸ್ಯೆ ಉಂಟಾಯಿತು ಎಂದು ಏಮ್ಸ್‌ ಮುಖ್ಯಸ್ಥ ರಣದೀಪ್‌ ಗುಲೇರಿಯಾ ನೇತೃತ್ವದ ಆಡಿಟ್‌ ತಂಡದ 23 ಪುಟಗಳ ವರದಿ ಹೇಳಿದೆ.

ಈ ವರದಿ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಗೌತಮ್‌ ಗಂಭೀರ್‌, ಕೇಜ್ರಿವಾಲ್‌ ರಿಗೆ ನಾಚಿಕೆಯಿದ್ದರೆ ದೇಶದ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.ಆಕ್ಸಿಜನ್‌ ಎಷ್ಟು ಬೇಕೆಂದು ಲೆಕ್ಕಾಚಾರಹಾಕಲು ದೆಹಲಿ ಸರ್ಕಾರ ಸರಿಯಾದ ವಿಧಾನವನ್ನೇ ಅನುಸರಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ.

Advertisement

ಪೆಟ್ರೋಲಿಯಂ ಮಾದರಿ ಆಕ್ಸಿಜನ್‌ ಸಂಗ್ರಹಿಸಿ: ಪೆಟ್ರೋ ಲಿಯಂ ಉತ್ಪನ್ನಗಳನ್ನು ಹೇಗೆ ಸಂಗ್ರಹಿಸಿಡಲಾಗುತ್ತದೆಯೋ ಅದೇ ಮಾದರಿಯಲ್ಲಿ 2-3 ವಾರಗಳಿಗೆ ಬೇಕಾಗುವಷ್ಟು ಆಕ್ಸಿಜನ್‌ ಅನ್ನು ಮುಂಚಿತವಾಗಿ ಸಂಗ್ರಹಿಸಿಡಬೇಕು ಎಂದು ಸುಪ್ರೀಂ ನೇಮಕ ಮಾಡಿದ ರಾಷ್ಟ್ರೀಯ ಕಾರ್ಯಪಡೆ(ಎನ್‌ ಟಿಎಫ್) ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next