Advertisement

Delhi; ಗ್ಯಾಂಗ್‌ಸ್ಟರ್‌ ಮದುವೆಗೆ ಪೊಲೀಸ್‌ ಸಿಬಂದಿ ಸರ್ಪಗಾವಲು!

01:08 AM Mar 12, 2024 | Team Udayavani |

ಹೊಸದಿಲ್ಲಿ: ಗ್ಯಾಂಗ್‌ಸ್ಟರ್‌ನೊಬ್ಬನ ಮದುವೆಯಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸರು ಭಾರಿ ಭದ್ರತೆ ಒದಗಿಸಿದ ಘಟನೆ ದೆಹಲಿಯಲ್ಲಿ ಸೋಮವಾರ ನಡೆದಿದೆ.

Advertisement

ಗ್ಯಾಂಗ್‌ಸ್ಟರ್‌ ಸಂದೀಪ್‌ ಅಲಿಯಾಸ್‌ ಕಾಲಾ ಜಥೇದಿ ಮದುವೆಗಾಗಿ ದೆಹಲಿಯ ಹೊರವಲಯದಲ್ಲಿ ಕಲ್ಯಾಣಮಂಟಪ ಬುಕ್‌ ಮಾಡಲಾಗಿತ್ತು. ಈ ವೇಳೆ ಗ್ಯಾಂಗ್‌ವಾರ್‌ಗಳಾಗುವುದನ್ನು ತಡೆಯಲು ಪೊಲೀಸರು ಸಕಲ ವ್ಯವಸ್ಥೆಗಳನ್ನು ಕೈಗೊಂಡಿದ್ದರು.

ಮದುವೆಗೆ ಆಹ್ವಾನಿಸಿದ್ದ ಅತಿಥಿಗಳಿಗೆ ಕ್ಯೂಆರ್‌ ಕೋಡಿರುವ ಬ್ಯಾಂಡ್‌, ಕಾರ್‌ಗಳಿಗೆ ಪಾಸ್‌, ಮದುವೆ ಮನೆ ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌, ಸಿಸಿ ಕ್ಯಾಮೆ ರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೇ ಡ್ರೋನ್‌ ಕ್ಯಾಮೆರಾದ ಮೂಲಕ ಎಲ್ಲರನ್ನು ಗಮನಿಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next