Advertisement

ಗಲ್ಲು ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ನಿರ್ಭಯಾ ಹಂತಕನ ಅರ್ಜಿ

10:01 AM Feb 29, 2020 | Hari Prasad |

ಹೊಸದಿಲ್ಲಿ: ನಿರ್ಭಯಾ ಹಂತಕರಲ್ಲಿ ಒಬ್ಬನಾದ ಪವನ್‌ ಕುಮಾರ್‌ ಗುಪ್ತಾ, ತನಗೆ ನೀಡಲಾಗಿರುವ ಗಲ್ಲು ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕ್ಯುರೇಟಿವ್‌ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ ತನ್ನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿಗಣಿಸಬೇಕೆಂದು ಆತ ಬೇಡಿದ್ದಾನೆ.

Advertisement

ಶಿಕ್ಷೆ ಜಾರಿಯಾದ ಅನಂತರ, ಪ್ರಕರಣದ ನಾಲ್ವರು ಅಪರಾಧಿಗಳಿಗೆ ನಿಗದಿತ ಸಮಯದಲ್ಲಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಇರುವ ಕೆಲವಾರು ಕಾನೂನು ಅವಕಾಶಗಳನ್ನು ಬಳಸಿಕೊಳ್ಳಬಹುದಾಗಿತ್ತು. ಈ ಬಗ್ಗೆ ಪವನ್‌ಗೆ ಮಾಹಿತಿ ಇರಲಿಲ್ಲ. ಹಾಗಾಗಿ, ಆತ ಈಗ ಅರ್ಜಿ ಸಲ್ಲಿಸಿದ್ದಾನೆ ಎಂದು ಆತನ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next