Advertisement

ಐಸ್ ಕ್ರೀಮ್ ಸ್ಟಾಲ್ ಗೆ ಬಿಎಂಡಬ್ಲ್ಯೂ ಕಾರು ನುಗ್ಗಿಸಿದ ಫ್ಯಾಶನ್ ಡಿಸೈನರ್; ನಾಲ್ವರಿಗೆ ಗಾಯ

05:03 PM Aug 02, 2020 | keerthan |

ಹೊಸದಿಲ್ಲಿ: 29 ವರ್ಷದ ಮಹಿಳಾ ಫ್ಯಾಶನ್ ಡಿಸೈನರ್ ಒಬ್ಬರು ತಮ್ಮ ಬಿಎಂಡಬ್ಲ್ಯೂ ಕಾರನ್ನು ರಸ್ತೆಬದಿಯ ಐಸ್ ಕ್ರೀಮ್ ಸ್ಟಾಲ್ ಗೆ ನುಗ್ಗಿಸಿದ ಘಟನೆ ದಕ್ಷಿಣ ದಿಲ್ಲಿಯ ಕೈಲಾಶ್ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವಯರು ಗಾಯಗೊಂಡಿದ್ದಾರೆ.

Advertisement

ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಕಾರು ಚಲಾಯಿಸುತ್ತಿದ್ದ ಹರ್ಯಾಣದ ಫರೀದಾಬಾದ್ ಮೂಲದ ರೋಶನಿ ಅರೋರಾ ರನ್ನು ಪೊಲೀಸರು ಬಂಧಿಸಿದ್ದಾರೆ.

ಐಸ್ ಕ್ರೀಮ್ ಸ್ಟಾಲ್ ಗೆ ಕಾರು ನುಗ್ಗಿಸಿದ ಘಟನೆ ದ್ರಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಐಸ್ ಕ್ರೀಮ್ ಸ್ಟಾಲ್ ಬಳಿ ಹಲವರು ನಿಂತಿದ್ದು, ಕಾರಿನ ವೇಗದ ಹೊಡೆತಕ್ಕೆ ಸಿಲುಕಿ ನಾಲ್ವರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಚಂದ್ರಯಾನ-2: ಪ್ರಗ್ಯಾನ್ ರೋವರ್ ಬಗ್ಗೆ ಮಹತ್ವದ ಮಾಹಿತಿ ನೀಡಿದ ಷಣ್ಮುಗ ಸುಬ್ರಹ್ಮಣಿಯನ್

ಘಟನೆಯಲ್ಲಿ ಗಾಯಗೊಂಡ ಮುಖೇಶ್ ಕುಮಾರ್ ಎಂಬಾತ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾನು ಸ್ಟಾಲ್ ನಲ್ಲಿ ಐಸ್ ಕ್ರೀಮ್ ಖರೀದಿಸುತ್ತಿದೆ. ಆಗ ವೇಗವಾಗಿ ಕಾರು ಬಂದು ಢಿಕ್ಕಿ ಹೊಡೆದು, ಐಸ್ ಕ್ರೀಮ್ ಪಾರ್ಲರ್ ಗೆ ಢಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

ರೋಶನಿ ಆರೋರಾ ರನ್ನು ಬಂಧಿಸಿ ಪೊಲೀಸರು ಕಾರನ್ನು ಜಪ್ತಿ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next