Advertisement

Delhi Elections: ಶೀಲಾ ದೀಕ್ಷಿತ್‌ ಪುತ್ರ ಸಂದೀಪ್‌ ಸೇರಿ 21 ಮಂದಿಗೆ ಟಿಕೆಟ್‌

02:10 AM Dec 13, 2024 | Team Udayavani |

ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ 21 ಅಭ್ಯರ್ಥಿಗಳ ಮೊದಲ ಪಟ್ಟಿ ಯನ್ನು ಕಾಂಗ್ರೆಸ್‌ ಗುರು ವಾರ ಪ್ರಕಟಿಸಿದೆ. ಹೊಸದಿಲ್ಲಿ ಕ್ಷೇತ್ರದಿಂದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್‌ ವಿರುದ್ಧ ಮಾಜಿ ಸಿಎಂ ದಿ| ಶೀಲಾ ದೀಕ್ಷಿತ್‌ ಅವರ ಪುತ್ರ ಸಂದೀಪ್‌ ದೀಕ್ಷಿತ್‌ ಅವರನ್ನು ಕಣಕ್ಕಿಳಿ ಸಲಾಗಿದೆ. ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷ ದೇವೇಂದ್ರ ಯಾದವ್‌ ಬಾದ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆಪ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಸೀಲಂಪುರ್‌ ಶಾಸಕ ಅಬ್ದುಲ್‌ ರೆಹಮಾನ್‌, ತಮ್ಮ ಹಾಲಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿ­ದ್ದಾರೆ. ಚಾಂದಿನಿ ಚೌಕ್‌ನಿಂದ ಸಂಸದ ಜೈಪ್ರಕಾಶ್‌ ಅಗರ್ವಾಲ್‌ ಪುತ್ರ ಮುದಿತ್‌ ಕಣಕ್ಕಿಳಿಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next