Advertisement
ವಿಚಾರಣೆಗೆ ಹಾಜರಾಗುವ ಗಂಟೆಗಳ ಮೊದಲು ಬೆಳಗ್ಗೆ 10 ಗಂಟೆಗೆ ತಮ್ಮ ಮನೆಯಿಂದ ಹೊರಟಾಗ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ರೋಡ್ ಶೋ ಮತ್ತು ಭಾಷಣ ಮಾಡಿದ್ದರು.
Related Articles
Advertisement
ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಮನೀಶ್ ಸಿಸೋಡಿಯಾ, ಇದು ಸವಾಲಿನ ಸಮಯ ಎಂದು ಹೇಳಿದರು ಮತ್ತು ಜೈಲಿಗೆ ಹೋಗುವ ಭಯವಿಲ್ಲ ಎಂದು ಪುನರುಚ್ಚರಿಸಿದರು. ರಾಮ್ ಪ್ರಸಾದ್ ಬಿಸ್ಮಿಲ್ ಅವರ ಸರ್ಫರೋಷಿ ಕಿ ತಮನ್ನಾ ಎಂಬ ಅಮರ ಸಾಲುಗಳನ್ನು ಪಠಿಸಿ, ನಾನು ಯಾವಾಗಲೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನಿರಂತರ ಬೆಂಬಲಕ್ಕಾಗಿ ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದರು.
”ಇಂದು ಮತ್ತೆ ಸಿಬಿಐ ವಿಚಾರಣೆಗೆ ಹೋಗಲಿದ್ದು, ಸಂಪೂರ್ಣ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಲಕ್ಷಾಂತರ ಮಕ್ಕಳ ಪ್ರೀತಿ ಮತ್ತು ಕೋಟ್ಯಂತರ ದೇಶವಾಸಿಗಳ ಆಶೀರ್ವಾದ ನಮ್ಮೊಂದಿಗಿದೆ.ಒಂದಿಷ್ಟು ತಿಂಗಳು ಜೈಲಿನಲ್ಲಿ ಇರಬೇಕಾದರೂ ನನಗಿಷ್ಟ. ನಾನು ಭಗತ್ ಸಿಂಗ್ ನ ಅನುಯಾಯಿ, ದೇಶಕ್ಕಾಗಿ ಭಗತ್ ಸಿಂಗ್ ಗಲ್ಲಿಗೇರಿದ. ಇಂತಹ ಸುಳ್ಳು ಆರೋಪಗಳಿಂದ ಜೈಲಿಗೆ ಹೋಗುವುದು ಸಣ್ಣ ವಿಷಯ” ಎಂದು ಸಿಸೋಡಿಯಾ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ವಿಧಿಸಲಾಗಿರುವುದರಿಂದ ಸ್ಥಳವನ್ನು ಖಾಲಿ ಮಾಡುವಂತೆ ಮನವಿ ಮಾಡಲಾಗಿತ್ತು ಆದರೆ ಅವರು ಕುಳಿತು ಘೋಷಣೆಗಳನ್ನು ಕೂಗಿದರು. ಎಎಪಿ ಸಂಸದ ಸಂಜಯ್ ಸಿಂಗ್, ದೆಹಲಿ ಸಚಿವ ಗೋಪಾಲ್ ರಾಯ್ ಸೇರಿದಂತೆ ಒಟ್ಟು 50 ಜನರನ್ನು (42 ಪುರುಷರು ಮತ್ತು 8 ಮಹಿಳೆಯರು) ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.