ಹೊಸದಿಲ್ಲಿ: ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪತಿ, ಕಾಂಗ್ರೆಸ್ ನಾಯಕ,ಸಂಸದ ಶಶಿ ತರೂರ್‌ಗೆ ದೆಹಲಿ ಕೋರ್ಟ್ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಜೂನ್ 7 ಕ್ಕೆ ಕೋರ್ಟ್‌ಗೆ ಖುದ್ದು ತರೂರ್ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
ಪ್ರಕರಣದ ತನಿಖೆಯಲ್ಲಿ ಅಪರಾಧಗಳ ಆಯೋಗಕ್ಕೆ ತರೂರ್ ವಿರುದ್ಧ ಮುಂದುವರಿಯಲು ಸಾಕಷ್ಟು ಆಧಾರಗಳಿರುವ ಹಿನ್ನಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.
ಮೇ 14 ರಂದು ದೆಹಲಿ ಪೊಲೀಸರು ತರೂರ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದರು. 2014 ರ ಜನವರಿ 17 ರಂದು ದೆಹಲಿಯ ಹೊಟೇಲ್‌ನಲ್ಲಿ ಸುದಂದಾ ಶವವಾಗಿ ಪತ್ತೆಯಾಗಿದ್ದರು. 2015 ರ ಜನವರಿ 1 ರಂದು ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
3,000 ಪುಟಗಳ ಪೊಲೀಸರ ಚಾರ್ಜ್ ಶೀಟ್‌ನಲ್ಲಿ ಶಶಿ ತರೂರ್ ಓರ್ವರೇ ಆರೋಪಿಯಾಗಿದ್ದಾರೆ.
ಶಶಿ ತರೂರ್ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆಯುತ್ತಾರಾ, ಇಲ್ಲ ಜೈಲು ಪಾಲಗುತ್ತಾರೋ ಎನ್ನುವುದು ಜೂನ್ 7 ರಂದು ತೀರ್ಮಾನವಾಗಲಿದೆ.