ನವದೆಹಲಿ: ಐ.ಎನ್.ಎಕ್ಸ್. ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆಯನ್ನು ಎದುರಿಸುತ್ತಿರುವ ಮಾಜೀ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ನ್ಯಾಯಾಂಗ ಬಂಧನದ ಅವಧಿ ಮತ್ತೆ 14 ದಿನಗಳ ಕಾಲ ವಿಸ್ತರಣೆಗೊಂಡಿದೆ.
ಚಿದಂಬರಂ ಅವರನ್ನು ವಿಚಾರಣೆ ನಡೆಸಲು ತನಗೆ ಇನ್ನೊಂದು ದಿನದ ಅವಕಾಶವನ್ನು ನೀಡಬೇಕು ಎಂಬ ಜಾರಿ ನಿರ್ದೇಶನಾಲಯದ ಮನವಿಯನ್ನು ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ತಿರಸ್ಕರಿಸಿದರು.
ಚಿದಂಬರಂ ತಿಹಾರ್ ಜೈಲಿನಲ್ಲಿ ಅವರಿಗೆ ಮನೆಯಿಂದಲೇ ತಯಾರಿಸಿ ತರುವ ಆಹಾರವನ್ನು ನೀಡಲು ನ್ಯಾಯಾಲಯವು ತನ್ನ ಅನುಮತಿಯನ್ನು ನೀಡಿದೆ. ಇಷ್ಟು ಮಾತ್ರವಲ್ಲದೇ ಮಾಜೀ ಕೇಂದ್ರ ಸಚಿವರಿಗೆ ತಿಹಾರ್ ಜೈಲಿನಲ್ಲಿ ಔಷಧಿಗಳನ್ನು, ಪಾಶ್ಚಾತ್ಯ ಮಾದರಿಯ ಶೌಚಾಲಯ ವ್ಯವಸ್ಥೆ, ಭದ್ರತೆ ಹಾಗೂ ಪ್ರತ್ಯೇಕ ಜೈಲು ಕೊಠಡಿಯನ್ನೂ ಸಹ ಒದಗಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲವು ನಿರ್ದೇಶನವನ್ನು ನೀಡಿದೆ.
ಚಿದಂಬರಂ ಅವರ ಅರ್ಜಿಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಕೊಠಡಿಯ ಒಳಗೆ ತನ್ನ ಮೊಬೈಲ್ ನಲ್ಲಿ ಚಿದಂಬರಂ ಅವರ ಫೊಟೋವನ್ನು ಕ್ಲಿಕ್ಕಿಸಲು ಯತ್ನಿಸಿದ ವಕೀಲರೊಬ್ಬರನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಆ ವಕೀಲರ ಫೋನನ್ನು ನ್ಯಾಯಾಲಯವು ತನ್ನ ವಶಕ್ಕೆ ಪಡೆದುಕೊಂಡಿತು ಮತ್ತು ನ್ಯಾಯಾಲಯದ ಕ್ಷಮೆ ಕೇಳುವಂತೆ ಆ ವಕೀಲರಿಗೆ ಸೂಚಿಸಲಾಯಿತು.
ನ್ಯಾಯಾಲಯದಿಂದ ಹೊರಬರುವ ಸಂದರ್ಭದಲ್ಲಿ ಮಾತನಾಡಿದ ಚಿದಂಬರಂ ಅವರು, ಐರೋಪ್ಯ ಒಕ್ಕೂಟಗಳ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದ ವಿಚಾರದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಆ ವಕೀಲರ ಫೋನನ್ನು ನ್ಯಾಯಾಲಯವು ತನ್ನ ವಶಕ್ಕೆ ಪಡೆದುಕೊಂಡಿತು ಮತ್ತು ನ್ಯಾಯಾಲಯದ ಕ್ಷಮೆ ಕೇಳುವಂತೆ ಆ ವಕೀಲರಿಗೆ ಸೂಚಿಸಲಾಯಿತು.
ನ್ಯಾಯಾಲಯದಿಂದ ಹೊರಬರುವ ಸಂದರ್ಭದಲ್ಲಿ ಮಾತನಾಡಿದ ಚಿದಂಬರಂ ಅವರು, ಐರೋಪ್ಯ ಒಕ್ಕೂಟಗಳ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿದ ವಿಚಾರದಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ‘ಯಾರಿಗೆ ಗೊತ್ತು, ಐರೋಪ್ಯ ಒಕ್ಕೂಟದ ಸಂಸದರನ್ನು ಮುಂಬರುವ ಅಧಿವೇಶನದಲ್ಲಿ ಸದನಕ್ಕೆ ಆಹ್ವಾನಿಸಲೂಬಹುದು ಮತ್ತು ಅಲ್ಲಿ ಅವರಿಗೆ ಕೇಂದ್ರ ಸರಕಾರವನ್ನು ಸಮರ್ಥಿಸಿ ಮಾತನಾಡುವಂತೆ ಸೂಚಿಸಲೂಬಹುದು’ ಎಂದು ವ್ಯಂಗ್ಯವಾಗಿ ನುಡಿದರು.