ಹೊಸದಿಲ್ಲಿ : ಹಣ ಅಕ್ರಮ ಕೇಸಿನಲ್ಲಿ ದಿಲ್ಲಿ ನ್ಯಾಯಾಲಯ ಇಂದು ಸೋಮವಾರ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್ ವಾದ್ರಾ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಐದು ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಭದ್ರತೆಯ ಆಧಾರದಲ್ಲಿ ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರು.
ಆದರೆ ವಾದ್ರಾ ಅವರು ಕೋರ್ಟಿನ ಪೂರ್ವಾನುಮತಿ ಇಲ್ಲದೆ ದೇಶ ಬಿಟ್ಟು ಹೋಗುವಂತಿಲ್ಲ ಎಂಬ ಶರತ್ತನ್ನು ಹಾಕಲಾಗಿದೆ.
ಸಾಕ್ಷ್ಯ ನಾಶ ಮಾಡಬಾರದು ಮತ್ತು ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು ಎಂಬ ಶರತ್ತುಗಳನ್ನು ಕೂಡ ವಾದ್ರಾ ಮೇಲೆ ವಿಧಿಸಲಾಗಿದೆ.
ಲಂಡನ್ ನ ಬ್ರ್ಯಾನ್ ಸ್ಟನ್ ಸ್ಕ್ವಾರ್ ನಂಬರ್ 12ರಲ್ಲಿ 1.9 ದಶಲಕ್ಷ ಪೌಂಡ್ ಮೌಲ್ಯದ ಸ್ಥಿರಾಸ್ತಿಯನ್ನು ಖರೀದಿಸುವಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ, ರಾಬರ್ಟ್ ವಾದ್ರಾ ಹಣ ಅಕ್ರಮ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ.