Advertisement

20 ಕೋ.ರೂ ಒಳಗೆ ಆಗಬೇಕಿದ್ದ ಕೇಜ್ರಿವಾಲ್ ನಿವಾಸ 53 ಕೋಟಿ ರೂಗೆ ಏರಿಕೆ, ಸಿಎಜಿಯಿಂದ ತನಿಖೆ

07:54 PM Jun 27, 2023 | Team Udayavani |

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರ ಅಧಿಕೃತ ನಿವಾಸ ನವೀಕರಣ ವೆಚ್ಚದ ಬಗ್ಗೆ ಭಾರತದ ಮಹಾಲೇಖ ಪಾಲರು (ಸಿಎಜಿ) ತನಿಖೆ ನಡೆಸಲಿದ್ದಾರೆ.

Advertisement

15 ಕೋಟಿ ರೂ.ಗಳಿಂದ 20 ಕೋಟಿ ರೂ. ವೆಚ್ಚದ ಒಳಗೆ ಆಗಬೇಕಾಗಿದ್ದ ಕಾಮಗಾರಿ 53 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು ಎಂದು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಆರೋಪಿಸಿ, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಅದನ್ನು ಆಧರಿಸಿ ಮಂಗಳವಾರ ಕೇಂದ್ರ ಸರ್ಕಾರ ಸಿಎಜಿ ಮೂಲಕ ತನಿಖೆಗೆ ಆದೇಶ ನೀಡಿದೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಆಪ್‌, “ದೆಹಲಿಯಲ್ಲಿನ ಸತತ ಚುನಾವಣಾ ಸೋಲುಗಳಿಂದ ಹತಾಶೆಗೆ ಒಳಗಾದ ಬಿಜೆಪಿ ಇಂಥ ಕ್ಷುಲ್ಲಕ ಕ್ರಮಕ್ಕೆ ಮುಂದಾಗಿದೆ’ ಎಂದು ದೂರಿದೆ.

ಇದನ್ನೂ ಓದಿ: ಮುಂಬೈ-ಗೋವಾ ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ರೈಲಿಗೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next