Advertisement

Delhi CM: ಆತಿಶಿ ಪೋಷಕರು ಅಫ್ಜಲ್‌ ಗುರು ಬೆಂಬಲಿಗರು: ಸ್ವಾತಿ ಮಲಿವಾಲ್‌ ಆರೋಪ

07:34 PM Sep 17, 2024 | Team Udayavani |

ಹೊಸದಿಲ್ಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಆತಿಶಿ (Atishi)  ಅವರನ್ನು ಆಯ್ಕೆ ಮಾಡುವ ಆಮ್ ಆದ್ಮಿ ಪಕ್ಷದ (AAP) ನಿರ್ಧಾರವನ್ನು ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ (Swati Maliwal) ಟೀಕಿಸಿದ್ದಾರೆ. ಅಪರಾಧಿ ಅಫ್ಜಲ್ ಗುರುವನ್ನು ಗಲ್ಲಿಗೇರಿಸುವುದನ್ನು ತಡೆಯಲು ಆತಿಶಿ ಕುಟುಂಬವು ಹೋರಾಡಿದೆ ಎಂದು ಹೇಳಿದ್ದಾರೆ.

Advertisement

ಆಪ್‌ ನ ದೆಹಲಿ ಶಾಸಕರು ಬೆಳಿಗ್ಗೆ ಸಭೆ ಸೇರಿ ಆತಿಶಿ ಅವರನ್ನು ತಮ್ಮ ಶಾಸಕಾಂಗ ನಾಯಕಿಯನ್ನಾಗಿ ಆಯ್ಕೆ ಮಾಡಿದ ಮಂಗಳವಾರದ ಬೆಳವಣಿಗೆಗಳಿಗೆ ಮಲಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಎರಡು ದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹುದ್ದೆಯಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಹೀಗಾಗಿ ಇಂದು ಮುಂದಿನ ಸಿಎಂ ಆಯ್ಕೆ ನಡೆದಿದೆ. ಸಂಜೆ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್‌ ರಾಜೀನಾಮೆ ನೀಡಿದ್ದಾರೆ.

content-img

2013 ರಲ್ಲಿ ಅಪರಾಧಿ ಅಫ್ಜಲ್ ಗುರುವಿಗೆ ಕ್ಷಮಾದಾನ ಅರ್ಜಿಗೆ ಸಹಿ ಮಾಡಿದ ಹಲವಾರು ಕಾರ್ಯಕರ್ತರು ಮತ್ತು ಪ್ರೊಫೆಸರ್‌ ಗಳಲ್ಲಿ ಆತಿಶಿ ಅವರ ಪೋಷಕರು ಇದ್ದಾರೆ ಎಂದು ಮಲಿವಾಲ್ ಆರೋಪಿಸಿದ್ದಾರೆ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಬರೆದಿರುವ ಅವರು, “ಇಂದು ದೆಹಲಿಗೆ ಬಹಳ ದುಃಖದ ದಿನವಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅತಿಶಿ “ಡಮ್ಮಿ ಸಿಎಂ” ಆಗಿದ್ದರೂ, ಈ ವಿಷಯವು ರಾಷ್ಟ್ರೀಯ ಭದ್ರತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಅವರು ಆರೋಪಿಸಿದ್ದಾರೆ. ”ಈ ಸಮಸ್ಯೆ ದೇಶದ ಭದ್ರತೆಗೆ ಸಂಬಂಧಿಸಿದ್ದು. ದೇವರು ದೆಹಲಿಯನ್ನು ಕಾಪಾಡಲಿ” ಎಂದು ಸ್ವಾತಿ ಮಲಿವಾಲ್ ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.