Advertisement

ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ

11:07 AM Jun 09, 2019 | Suhan S |

ಮುಂಡರಗಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಪಟ್ಟಣದ ಅನ್ನದಾನೀಶ್ವರ ಮಠದಿಂದ ಕೈಗೊಂಡ ದೆಹಲಿ ಚಲೋಗೆ ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಚಾಲನೆ ನೀಡಿದರು.

Advertisement

ನಂತರ ಮಾತನಾಡಿದ ಸ್ವಾಮೀಜಿ, ನಮಗೆ ಬೇಕಾದ ಸೌಲಭ್ಯ ಪಡೆದುಕೊಳ್ಳಲು ಹೋರಾಟ ಮಾಡುವುದು ಅತ್ಯವಶ್ಯವಿದೆ. ಶಾಂತಿಯುತ ಹೋರಾಟದ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕು. ರೈತರು, ರೈತ ಮಹಿಳೆಯರಿಗೆ ಸೂಕ್ತವಾದ ಮಾಸಾಶನ ನೀಡಬೇಕು ಎಂದರು.

ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಶಿವಾನಂದ ಇಟಗಿ ಮಾತನಾಡಿ, ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೆ 10 ಲಕ್ಷ ರೂ. ವರೆಗೂ ಬಡ್ಡಿರಹಿತ ಸಾಲ ಸೌಲಭ್ಯ ನೀಡಬೇಕು. ಸ್ವತಂತ್ರ ಹೋರಾಟಗಾರರ, ಸಂತರ, ಶರಣರ, ದಾರ್ಶನಿಕರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಒಂದೇ ದಿನವೇ ಆಚರಿಸುವಂತೆ ಆಗಬೇಕು ಎಂದು ಆಗ್ರಹಿಸಿ ದೆಹಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ರೈತ ಸಂಘ ಅಧ್ಯಕ್ಷ ಹನುಮಪ್ಪ ಕುರಿ ಮಾತನಾಡಿದರು. ಬಿಜೆಪಿ ಮಹಿಳಾ ರೈತ ಮೋರ್ಚಾ ಅಧ್ಯಕ್ಷೆ ಕಸ್ತೂರೆವ್ವ ಅರಕೇರಿ, ರಾಮಣ್ಣ ಇಲ್ಲೂರ, ಯಲ್ಲಪ್ಪ ಸಂಶಿ, ಈರಣ್ಣ ಲದ್ದಿ, ಈರಣ್ಣ ಚೌಡಾಳ, ಗವಿಸಿದ್ಧಪ್ಪ ಗಟ್ಟಿರಡ್ಡಿಹಾಳ, ಕನಕಪ್ಪ ಶಾಸ್ತ್ರಿ, ಈರಣ್ಣ ಇಟಗಿ, ಈರಪಮ್ಮ ಸಂದಣ್ಣವರ, ಕರಬಸಪ್ಪ ಚೌಡಾಳ, ಯಂಕಮ್ಮ ಪ್ಯಾಟಿ, ದೀಪಾ ಪಾಟೀಲ, ಶಿವಮ್ಮ ಗಡಗಿ, ನಾಗರಾಜ ಬಡಿಗೇರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next