Advertisement

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ

10:30 PM Mar 30, 2021 | Team Udayavani |

ಹೊಸದಿಲ್ಲಿ : ಶ್ರೇಯಸ್‌ ಅಯ್ಯರ್‌ ಅವರ ಅನುಪಸ್ಥಿತಿಯಲ್ಲಿ ವಿಕೆಟ್‌ ಕೀಪಿಂಗ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.

Advertisement

ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಇದನ್ನು ಪ್ರಕಟಿಸಿತು.

23 ವರ್ಷದ ಪಂತ್‌ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಇದಕ್ಕೂ ಮೊದಲು ಅವರು ರಣಜಿ ಟ್ರೋಫಿ ಮತ್ತು ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ದಿಲ್ಲಿ ತಂಡದ ನೇತೃತ್ವ ವಹಿಸಿದ್ದರು.

“ನಾನು ದಿಲ್ಲಿಯಲ್ಲೇ ಕ್ರಿಕೆಟ್‌ನಲ್ಲಿ ಮೇಲೇರುತ್ತ ಬಂದವನು. 6 ವರ್ಷಗಳ ಹಿಂದೆ ಐಪಿಎಲ್‌ ಪಯಣ ಆರಂಭಿಸಿದೆ. ಈಗ ತಂಡದ ನಾಯಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಕನಸೊಂದು ನನಸಾಗಿದೆ’ ಎಂಬುದಾಗಿ ಪಂತ್‌ ಪ್ರತಿಕ್ರಿಯಿಸಿದ್ದಾರೆ. ಡೆಲ್ಲಿ ತಂಡದ ನಾಯಕತ್ವಕ್ಕಾಗಿ ಸ್ಮಿತ್‌, ಆರ್‌. ಅಶ್ವಿ‌ನ್‌, ರಹಾನೆ ಹೆಸರು ಕೂಡ ಕೇಳಿಬಂದಿತ್ತು.

ಇದನ್ನೂ ಓದಿ :ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗಿನ ಸಮಸ್ಯೆ ನಿವಾರಣೆ : ತನಿಖೆ ಆರಂಭ

Advertisement
Advertisement

Udayavani is now on Telegram. Click here to join our channel and stay updated with the latest news.

Next