Advertisement
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟಿಗೆ 129 ರನ್ ಗಳಿಸಿದರೆ, ಡೆಲ್ಲಿ 19.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 130 ಹಾಗೂ ಇದಕ್ಕೂ ಕಡಿಮೆ ಮೊತ್ತದ ಚೇಸಿಂಗ್ ವೇಳೆ ಡೆಲ್ಲಿ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಂತಾಯಿತು.
Related Articles
ಆವೇಶ್ ಖಾನ್, ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನೋರ್ಜೆ ಸೇರಿಕೊಂಡು ಮುಂಬೈ ಮೇಲೆರಗಿದರು. ಖಾನ್ ಮತ್ತು ಪಟೇಲ್ ತಲಾ 3 ವಿಕೆಟ್ ಉಡಾಯಿಸಿದರು. ವಿಶ್ವದ ಅತಿ ವೇಗದ ಬೌಲರ್ ನೋರ್ಜೆ ವಿಕೆಟ್ ಮೇಡನ್ ಮೂಲಕ ಮ್ಯಾಜಿಕ್ ಮಾಡಿದರು. ಶಾರ್ಜಾದಲ್ಲಿ ರನ್ ಹರಿದು ಬರುವುದು ನಿಂತಿದೆ ಎಂಬುದು ಮತ್ತೂಮ್ಮೆ ಸಾಬೀತಾಯಿತು.
Advertisement
ಆವೇಶ್ ಖಾನ್ ತಮ್ಮ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮ (7) ವಿಕೆಟ್ ಉಡಾಯಿಸಿದರು. ಬಳಿಕ ಅಕ್ಷರ್ ಪಟೇಲ್ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿ ಡಿ ಕಾಕ್ (19), ಸೂರ್ಯಕುಮಾರ್ (33) ಮತ್ತು ಸೌರಭ್ ತಿವಾರಿ (15) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪವರ್ ಪ್ಲೇ ಮುಗಿದ ಕೂಡಲೇ ಚೆಂಡನ್ನು ಕೈಗೆತ್ತಿಕೊಂಡ ಪಟೇಲ್, ದ್ವಿತೀಯ ಎಸೆತದಲ್ಲೇ ಡಿ ಕಾಕ್ ವಿಕೆಟ್ ಹಾರಿಸಿದರು.ಮಧ್ಯಪ್ರದೇಶದ ಆವೇಶ್ ಖಾನ್ ಮೊದಲೆರಡು ಓವರ್‌ಗಳಲ್ಲಿ ಬಿಟ್ಟುಕೊಟ್ಟದ್ದು ಕೇವಲ 7 ರನ್. ಇದರಲ್ಲಿ 8 ಡಾಟ್ ಬಾಲ್‌ಗಳಾಗಿದ್ದವು. ಡೆತ್ ಓವರ್‌ನಲ್ಲೂ ಆವೇಶ್ ದಾಳಿ ಅತ್ಯಂತ ಹರಿತವಾಗಿತ್ತು. ಹಾರ್ದಿಕ್ ಪಾಂಡ್ಯ (17) ಮತ್ತು ಕೋಲ್ಟರ್ ನೈಲ್ (1) ಆಟ ಮುಗಿಸಿದರು. ಈವರೆಗೆ ಸಿಡಿಯುವಲ್ಲಿ ವಿಫಲರಾದ ಸೂರ್ಯಕುಮಾರ್ ಯಾದವ್ 33 ರನ್ ಬಾರಿಸಿ ಮುಂಬೈ ಸರದಿಯ ಟಾಪ್ ಸ್ಕೋರರ್ ಎನಿಸಿದ್ದು ವಿಶೇಷ. 26 ಎಸೆತ ಎದುರಿಸಿದ ಸೂರ್ಯ 2 ಸಿಕ್ಸರ್, 2 ಫೋರ್ ಹೊಡೆದು ಮಿಂಚಿದರು. ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 636 ಹೊಸ ಪ್ರಕರಣ : ನಾಲ್ವರು ಸೋಂಕಿತರ ಸಾವು ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ರಬಾಡ ಬಿ ಅವೇಶ್ 7
ಡಿ ಕಾಕ್ ಸಿ ಜೋರ್ಜೆ ಬಿ ಅಕ್ಷರ್ 19
ಸೂರ್ಯಕುಮಾರ್ ಸಿ ರಬಾಡ ಬಿ ಅಕ್ಷರ್ 33
ಸೌರಭ್ ತಿವಾರಿ ಸಿ ಪಂತ್ ಬಿ ಅಕ್ಷರ್ 15
ಕೈರನ್ ಪೊಲಾರ್ಡ್ ಬಿ ನೋರ್ಜೆ 6
ಹಾರ್ದಿಕ್ ಪಾಂಡ್ಯ ಬಿ ಅವೇಶ್ 17
ಕೃಣಾಲ್ ಪಾಂಡ್ಯ ಔಟಾಗದೆ 13
ಕೋಲ್ಟರ್ ನೈಲ್ ಬಿ ಅವೇಶ್ 1
ಜಯಂತ್ ಯಾದವ್ ಸಿ ಸ್ಮಿತ್ ಬಿ ಅಶ್ವಿನ್ 11
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಇತರ 6
ಒಟ್ಟು(8 ವಿಕೆಟಿಗೆ) 129
ವಿಕೆಟ್ ಪತನ; 1-8, 2-37, 3-68, 4-80, 5-87, 6-109, 7-111, 8-122.
ಬೌಲಿಂಗ್;
ಅನ್ರಿಚ್ ನೋರ್ಜೆ 4-1-19-1
ಅವೇಶ್ ಖಾನ್ 4-0-15-3
ಆರ್. ಅಶ್ವಿನ್ 4-0-41-0
ಕಾಗಿಸೊ ರಬಾಡ 4-0-33-0
ಅಕ್ಷರ್ ಪಟೇಲ್ 4-0-21-3 ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಎಲ್‌ಬಿಡಬ್ಲ್ಯುಬಿ ಕೃಣಾಲ್ 6
ಶಿಖರ್ ಧವನ್ ರನೌಟ್ 8
ಸ್ಟಿವನ್ ಸ್ಮಿತ್ ಬಿ ಕೋಲ್ಟರ್‌ನೆçಲ್
ರಿಷಭ್ ಪಂತ್ ಸಿ ಹಾರ್ದಿಕ್ ಬಿ ಜಯಂತ್ 26
ಶ್ರೇಯಸ್ ಅಯ್ಯರ್ ಔಟಾಗದೆ 33
ಅಕ್ಷರ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 9
ಹೆಟ್‌ಮೈರ್ ಸಿ ರೋಹಿತ್ ಬಿ ಬುಮ್ರಾ 15
ಆರ್. ಅಶ್ವಿನ್ ಔಟಾಗದೆ 20
ಇತರ 6
ಒಟ್ಟು(19.1 ಓವರ್‌ಗಳಲ್ಲಿ 6 ವಿಕೆಟಿಗೆ) 132
ವಿಕೆಟ್ ಪತನ:1-14, 2-15, 3-30, 4-57, 5-77, 6-93.
ಬೌಲಿಂಗ್;
ಟ್ರೆಂಡ್ ಬೌಲ್ಟ್ 4-0-24-1
ಜಯಂತ್ ಯಾದವ್ 4-0-31-1
ಕೃಣಾಲ್ ಪಾಂಡ್ಯ 2.1-0-18-1
ಜಸ್‌ಪ್ರೀತ್ ಬುಮ್ರಾ 4-0-29-1
ನಥನ್ ಕೋಲ್ಟರ್ ನೈಲ್ 4-0-19-1
ಕೈರನ್ ಪೊಲಾರ್ಡ್ 1-0-9-0