Advertisement

BJP ಸದಸ್ಯತ್ವ ಅಭಿಯಾನ: ಶಾಸಕಿ, ಸಂಸದೆಯಾಗುವವರಿಗೆ ಪ್ರಧಾನಿ ಆದ್ಯತೆ

08:10 PM Sep 02, 2024 | Team Udayavani |

ಹೊಸದಿಲ್ಲಿ: ಬಿಜೆಪಿಯ ಸಂಘಟನೆ ಪರ್ವ, ಸದಸ್ಯತ್ವ ಅಭಿಯಾನ 2024 ರ ಉದ್ಘಾಟನಾ ಸಮಾರಂಭ ಸೋಮವಾರ (ಸೆ 2) ರಂದು ನಡೆಯಿತು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಪ್ರಮುಖ ನಾಯಕರು ಭಾಗಿಯಾಗಿದ್ದರು.

Advertisement

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ “ಈ ಸದಸ್ಯತ್ವ ಅಭಿಯಾನದ ಸಮಯದಲ್ಲಿ ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ 33% ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಬಂದರೆ, ಗರಿಷ್ಠ ಸಂಖ್ಯೆಯ ಮಹಿಳೆಯರನ್ನು ಗೆಲ್ಲಿಸಿ ಎಂಎಲ್‌ಎ ಮತ್ತು ಸಂಸದರನ್ನಾಗಿ ಮಾಡಬಲ್ಲವರೆಲ್ಲರನ್ನು ನಮ್ಮ ಸದಸ್ಯತ್ವ ಅಭಿಯಾನದಲ್ಲಿ ಸೇರಿಸಬೇಕು’ ಎಂದರು.

“ಇಂದು ದೇಶದ ಬಡ ಜನರು ನಮ್ಮ ನೀತಿಗಳು, ನಿರ್ಧಾರಗಳು ಮತ್ತು ನಾವು ಅಳವಡಿಸಿಕೊಂಡ ಮಾರ್ಗಗಳ ಫಲಿತಾಂಶಗಳಲ್ಲಿ ಹೆಚ್ಚಿನ ನಂಬಿಕೆಯನ್ನು ಹೊಂದಿದ್ದಾರೆ. ಆದ್ದರಿಂದ, ನಾವು ಆ ಶಕ್ತಿಯೊಂದಿಗೆ ಮುನ್ನಡೆಯಬೇಕು. ಈ ಸದಸ್ಯತ್ವ ಅಭಿಯಾನವು ಎಲ್ಲಾ ಹಳೆಯ ದಾಖಲೆಗಳನ್ನು ಮುರಿಯುತ್ತದೆ ಎಂಬ ವಿಶ್ವಾಸವಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

”ಈ ಸದಸ್ಯತ್ವ ಅಭಿಯಾನವನ್ನು ಎಲ್ಲಿ ನಾವು ಕಡಿಮೆ ಮತಗಳನ್ನು ಪಡೆದಿದ್ದೇವೆ ಆ ಮತದಾನ ಕೇಂದ್ರದಿಂದ ಪ್ರಾರಂಭಿಸೋಣ. ಬಿಜೆಪಿ ಜನಪ್ರಿಯವಾಗಿರುವಲ್ಲಿ ಸದಸ್ಯರನ್ನು ಪಡೆಯುವುದು ಸುಲಭ, ಆದರೆ ನಮ್ಮ ಪ್ರಭಾವವನ್ನು ಹರಡಲು ಮತ್ತು ಬೆಂಬಲವನ್ನು ಪಡೆಯಲು ನಾವು ಸವಾಲಿನ ಕ್ಷೇತ್ರಗಳಲ್ಲಿ ಹೆಚ್ಚು ಶ್ರಮಿಸಬೇಕು” ಎಂದರು.

Advertisement

ನಾನು ರಾಜಕೀಯದಲ್ಲಿ ಇಲ್ಲದಿದ್ದಾಗ, ಜನಸಂಘದ ಕಾಲದಲ್ಲಿ ಕಾರ್ಯಕರ್ತರು ಬಹಳ ಉತ್ಸಾಹದಿಂದ ಗೋಡೆಗಳಿಗೆ ಪೋಸ್ಟರ್ ಗಳನ್ನು ಹಚ್ಚುತ್ತಿದ್ದರು, ಮತ್ತು ಅನೇಕ ರಾಜಕೀಯ ಪಕ್ಷದ ಮುಖಂಡರು ತಮ್ಮ ಭಾಷಣದಲ್ಲಿ ಗೋಡೆಗಳ ಪೋಸ್ಟರ್ ಗಳನ್ನು ಹಚ್ಚುವುದು ಕಾರಿಡಾರ್‌ಗೆ ತಲುಪಲಿಲ್ಲ ಎಂದು ತಮಾಷೆ ಮಾಡುತ್ತಿದ್ದರು. ಭಕ್ತಿಯಿಂದ ಗೋಡೆಗಳ ಮೇಲೆ ಕಮಲವನ್ನು ಚಿತ್ರಿಸಿದ ಜನರು ಅವರು, ಏಕೆಂದರೆ ಗೋಡೆಗಳ ಮೇಲೆ ತಾವು ಚಿತ್ರಿಸಿದ ಕಮಲವು ಎಂದಾದರೂ ಹೃದಯದ ಮೇಲೆ ಚಿತ್ರಿತವಾಗುತ್ತದೆ ಎಂದು ಅವರು ನಂಬಿದ್ದರು’ ಎಂದರು.

ನಮ್ಮ ಕುಟುಂಬಕ್ಕೆ, ಯಾರಾದರೂ ಬಿಜೆಪಿಗೆ ಹೊಸ ಸದಸ್ಯರಾದಾಗ ಅನುಭವಿಸುವ ಸಂತೋಷ ದೊಡ್ಡದು. ಆದ್ದರಿಂದ ಈ ಸದಸ್ಯತ್ವ ಅಭಿಯಾನ ಸಂಖ್ಯೆಗಳ ಆಟವಲ್ಲ. ಈ ಸದಸ್ಯತ್ವ ಅಭಿಯಾನ ಸಂಪೂರ್ಣ ಸೈದ್ಧಾಂತಿಕ ಮತ್ತು ಭಾವನಾತ್ಮಕ ಆಂದೋಲನವೂ ಆಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next