ಹೊಸದಿಲ್ಲಿ : ದಿಲ್ಲಿ ಮೆಟ್ರೋ ಪಿಂಕ್ ಲೈನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಜೋಹರಿ ಎನ್‌ಕ್ಲೇವ್ ಮೆಟ್ರೋ ಸ್ಟೇಶನ್‌ನಲ್ಲಿ ಕಾರ್ಯನಿರತರಾಗಿದ್ದ ಕೆಲಸಗಾರರ ಮೇಲೆ ರಾಸಾಯನಿಕವಿದ್ದ ಬ್ಯಾರಲ್ ಉರುಳಿ ಬಿದ್ದ ದುರ್ಘಟನೆಯಲ್ಲಿ ಓರ್ವ ಮೃತಪಟ್ಟು ಇತರ ಐವರು ಗಾಯಗೊಂಡರು.
Advertisement
ನಿನ್ನೆ ಬುಧವಾರ ಸಂಜೆ ಕಾಮಗಾರಿ ನಿರತ ಆರು ಮಂದಿಯ ಮೇಲೆ ರಾಸಾಯನಿಕವಿದ್ದ ಬ್ಯಾರಲ್ ಉರುಳಿ ಬಿತ್ತು. ತೀವ್ರವಾಗಿ ಗಾಯಗೊಂಡ ಈ ಆರು ಮಂದಿಯನ್ನು ಒಡನೆಯೇ ಆಸ್ಪತ್ರೆಗೆ ಸೇರಿಸಲಾಯಿತು. ಅವರಲ್ಲಿ ಒಬ್ಟಾತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ ಎಂದು ಮೆಟ್ರೋ ಮೂಲಗಳು ತಿಳಿಸಿವೆ.
ಮೃತ ವ್ಯಕ್ತಿಯನ್ನು 32ರ ಹರೆಯದ ಅಮಿತ್ ಚೌಹಾಣ್ ಎಂದು ಗುರುತಿಸಲಾಗಿದೆ.