ನವದೆಹಲಿ: ಫೇಸ್‌ಬುಕ್‌ನಿಂದ ಸಮಾಜದಲ್ಲಿ ವಿಷಯ, ಸಿದ್ಧಾಂತಗಳ ಆಧಾರದಲ್ಲಿ ಸಮುದಾಯಗಳ ನಡುವೆ ವಿಭಜನೆಗಳು ಉಂಟಾಗುತ್ತಿವೆ.
ಮಕ್ಕಳಿಗೆ ಫೇಸ್‌ಬುಕ್ ಮಾರಕವಾಗಿದೆ. ಇದನ್ನು ನಿಯಂತ್ರಿಸಲು ಮುಂದಾಗದ ಫೇಸ್‌ಬುಕ್, ತನ್ನ ಲಾಭದ ಮೇಲಷ್ಟೇ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂಬರ್ಥದ ಪ್ರಧಾನ ಲೇಖನವೊಂದು “ಟೈಮ್’ ನಿಯತಕಾಲಿಕೆಯ ಜಾಲತಾಣದಲ್ಲಿ ಪ್ರಕಟವಾಗಿದೆ.
ತನ್ನ ಮುಖಪುಟದಲ್ಲಿ ಫೇಸ್‌ಬುಕ್ ಸಂಸ್ಥಾಪಕ, ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಝುಗರ್‌ಬರ್ಗ್‌ರವರ ಫೋಟೋವನ್ನು ಹಾಕಿ, ಅದರ ಮೇಲೆ “ಡಿಲೀಟ್ ಫೇಸ್‌ಬುಕ್?’ ಎಂಬ ಪ್ರಶ್ನೆಯನ್ನು ಓದುಗರ ಮುಂದಿಟ್ಟಿದ್ದು, ಅದಕ್ಕೆ “ಡಿಲೀಟ್’ ಅಥವಾ “ಕ್ಯಾನ್ಸಲ್’ ಎಂಬ ಎರಡು ಆಯ್ಕೆಗಳನ್ನೂ ನೀಡಿದೆ.
ಇದನ್ನೂ ಓದಿ:500 ರೂ., 2 ಸಾವಿರ ರೂ. ನೋಟಿಂದ ಮಹಾತ್ಮಾ ಗಾಂಧಿ ಫೋಟೋ ತೆಗೆಯಿರಿ
ಈ ಹಿಂದೆ, ಫೇಸ್‌ಬುಕ್ ಸಂಸ್ಥೆಯು ತನ್ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಒಂದು ತಂಡವನ್ನು ರಚಿಸಿತ್ತು. ಆದರೆ, ಆ ವಿಭಾಗವು ಸರಾಗವಾಗಿ ತನ್ನ ಕಾರ್ಯ ನಿರ್ವಹಿಸಲು ಫೇಸ್‌ಬುಕ್ ಸಂಸ್ಥೆಯೇ ಬಿಡಲಿಲ್ಲ. ಆನಂತರ, 2020ರ ಡಿಸೆಂಬರ್‌ನಲ್ಲಿ ಆ ವಿಭಾಗವನ್ನು ಸಂಸ್ಥೆ ರದ್ದುಗೊಳಿಸಿದೆ. ಇದು ಆ ಸಂಸ್ಥೆಯ ಲಾಭಕೋರತನ ತೋರಿಸುತ್ತದೆ ಎಂದು ಲೇಖನದಲ್ಲಿ ವಿವರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.