Advertisement

ಬಡ್ಡಿ ಮನ್ನಾಕ್ಕೆ ಆಗ್ರಹಿಸಿ ಬೆಂಗಳೂರಿಗೆ ನಿಯೋಗ

02:27 PM Dec 15, 2019 | Team Udayavani |

ಕಲಬುರಗಿ: ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್‌ನಲ್ಲಿ ಟ್ರಾಕ್ಟರ್‌, ಪೈಪ್‌ಲೈನ್‌ ಮತ್ತು ಪಾಲಿಹೌಸ್‌ ಹಾಗೂ ತೋಟಗಾರಿಕೆ ಬೆಳೆಗೆ ಪಡೆದ ದೀರ್ಘಾವಧಿ ಸಾಲದ ಒಟ್ಟಾರೆ 39 ಕೋಟಿ ರೂ. ಬಡ್ಡಿ ಮನ್ನಾಗೊಳಿಸುವಂತೆ ರವಿವಾರ ಬೆಂಗಳೂರಿಗೆ ನಿಯೋಗ ತೆರಳು ನಿರ್ಧರಿಸಲಾಗಿದೆ.

Advertisement

ಶನಿವಾರ ನಗರದ ಹಿಂದಿ ಪ್ರಚಾರ ಸಭೆಯಲ್ಲಿ ನಡೆದ ಸಾಲಗಾರರ ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚಿಸಿ, ರವಿವಾರ ಬೆಂಗಳೂರಿಗೆ ಹೊರಟು ಸೋಮವಾರ ಬೆಂಗಳೂರಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಿ, ಬಡ್ಡಿ ಮನ್ನಾಮಾಡುವಂತೆ ನಿಯೋಗ ತೆರಳಲು ನಿರ್ಧರಿಸಲಾಯಿತು. ಸತತ ಮೂರು ವರ್ಷಗಳಿಂದ ಬರಗಾಲದ ಪರಿಸ್ಥಿತಿ ಇದ್ದುದರಿಂದ ರೈತರು ಕಷ್ಟದಲ್ಲಿದ್ದಾರೆ. ರೈತರು ಬಡ್ಡಿ ಕಟ್ಟುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ಬಡ್ಡಿ ಮನ್ನಾಮಾಡುವುದು ಅವಶ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶರಣಬಸವಪ್ಪ ಪಾಟೀಲ ಅಷ್ಠಗಾ ರೈತ ಮುಖಂಡರಾದ ಚಂದ್ರಶೇಖರ ಹರಸೂರ, ಬಸವರಾಜ ಇಂಗಿನ್‌ ಹೇಳಿದರು.

ಪ್ರಮುಖರಾದ ಅಶೋಕ ಗುರೂಜಿ, ರಾಜೇಂದ್ರ ಕರೆಕಲ್‌, ಎಂ.ಎಸ್‌. ಪಾಟೀಲ ನರಿಬೋಳ, ಜಂಡೆಕರ್‌ ಎಸ್‌.ಪಿ., ಸೇರಿಕಾರ, ಬಸವರಾಜ ಪಾಟೀಲ ಅಂಕಲಗಿ ಹಾಗೂ ಇನ್ನಿತರ ರೈತರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next