ಮಂಗಳೂರು: ಕೇಶವ ಸ್ಮೃತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ 72ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬುಧವಾರ ಕ್ರೈಸ್ತರ ನಿಯೋಗ ಭೇಟಿ ನೀಡಿ ಪೂಜೆ ಸಲ್ಲಿಸಿದೆ.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರಾÂಂಕ್ಲಿನ್ ಮೊಂತೆರೊ ನೇತೃತ್ವದಲ್ಲಿ ಸೌಹಾರ್ದ ಭೇಟಿ ನಡೆಯಿತು. ಕ್ರೈಸ್ತ ಸಮುದಾಯದ ಹಿರಿಯರು, ಗಣ್ಯರು, ವಕೀಲರನ್ನು ಒಳಗೊಂಡ ನಿಯೋಗ ನಾಲ್ಕು ವರ್ಷಗಳಿಂದ ಸಂಘನಿಕೇತನ ಗಣೇಶೋ ತ್ಸವಕ್ಕೆ ಭೇಟಿ ನೀಡುತ್ತಿದೆ. ತಿಲಕ್ ಸಮಾಜವನ್ನು ಒಗ್ಗೂಡಿಸಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿ ದ್ದರು. ಪ್ರಸ್ತುತ ಗಣೇಶೋತ್ಸವ ಮೂಲಕ ಜನತೆ ಜಾತಿ, ಮತ ಭೇದ ಮರೆತು ಒಟ್ಟು ಸೇರುತ್ತಿದ್ದಾರೆ.
ವೇದಿಕೆಯು ಸೌಹಾರ್ದಕ್ಕೆ ಪೂರಕವಾಗಿ ಗಣೇಶೋತ್ಸವ ಪ್ರತಿವರ್ಷ ಭೇಟಿ ಹಮ್ಮಿಕೊಳ್ಳುತ್ತಿದೆ ಎಂದು ಫ್ರಾÂಂಕ್ಲಿನ್ ಹೇಳಿದರು.
ಸಂಘನಿಕೇತನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸತೀಶ ಪ್ರಭು ಮಾತನಾಡಿ, ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ನೇತೃತ್ವದಲ್ಲಿ ಕ್ರೈಸ್ತ ಬಾಂಧವರು ಆಗಮಿಸಿ ಪೂಜೆ ಸಲ್ಲಿಸಿರುವುದು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ. ಈ ನಿಟ್ಟಿನಲ್ಲಿ ವೇದಿಕೆಯ ನಿಲುವು ಶ್ಲಾಘನೀಯ ಎಂದರು.
ನಿಯೋಗದಲ್ಲಿ ಕೆಥೋಲಿಕ್ ಸಭಾ ಅಧ್ಯಕ್ಷ ರಾಲ್ಫಿ ಡಿ’ಕೋಸ್ಟ, ಪ್ರಮುಖರಾದ ಲ್ಯಾನಿ ಮರಿಜಾ ಪಿಂಟೊ, ಅನಿತಾ ಪಿಂಟೊ, ಜಾಯಲ್ ಮೆಂಡೋನ್ಸಾ, ಸಂದೀಪ್ ಡಿ’ಸಿಲ್ವ, ಫ್ರಾನ್ಸಿಸ್ ಪಿಂಟೊ, ನೆಲ್ಸನ್ ಕ್ಯಾಸ್ಟಲಿನೊ, ಪ್ರಕಾಶ್, ಓಸ್ವಾಲ್ಡ್ ಡಿ’ಕುನ್ಹಾ, ರೋಶನ್ ಡಿ’ಸೋಜಾ, ನೆಲ್ಸನ್ ಫೆರಾವೊ ಹಾಜರಿದ್ದರು. ಸಂಘನಿಕೇತನ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಪ್ರವೀಣ್ ಕುಮಾರ್, ಪ್ರಮುಖರಾದ ರಘುವೀರ್ ಕಾಮತ್, ಯೋಗೀಶ್ ಆಚಾರ್ ಉಪಸ್ಥಿತರಿದ್ದರು.