Advertisement

Gruha Lakshmi ವಿಳಂಬ; ಖಂಡಿತ ಆಗಸ್ಟ್18 ಕ್ಕೆ ಹಣ ಖಾತೆಗೆ: ಸಚಿವೆ ಹೆಬ್ಬಾಳ್ಕರ್

08:43 PM Jun 17, 2023 | Team Udayavani |

ಚಿಕ್ಕಮಗಳೂರು : ರಾಜ್ಯದಲ್ಲಿ ಗೃಹ ಲಕ್ಷ್ಮೀ ಯೋಜನೆ ಮತ್ತಷ್ಟು ವಿಳಂಬವಾಗಲಿದ್ದು, ಆಗಸ್ಟ್ 17 ಅಥವಾ18 ನೇ ತಾರೀಕಿಗೆ ಖಂಡಿತ ಗೃಹಲಕ್ಷ್ಮೀಯರ ಖಾತೆಗೆ ಹಣ ಸೇರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ, ಯೋಜನೆ ಜನರಿಗೆ ಸರಳವಾಗಿ ಸಿಗಬೇಕು. ಅಪ್ಲಿಕೇಶನ್ ಹಾಕಲು ಮತ್ತಷ್ಟು ವಿಳಂಬ ಆಗಲಿದೆ, ಯೋಜನೆಯ ಬದಲಾವಣೆಯಿಂದ ವಿಳಂಬವಾಗುತ್ತಿದೆ ಅಷ್ಟೇ, ಹಾಗಾಗಿ, ಅಧಿಕಾರಿಗಳಿಗೆ ಕೆಲ ಬದಲಾವಣೆಗಳ ಸೂಚನೆ ನೀಡಿದ್ದೇವೆ. ಗ್ರಾಮ 1 ಕರ್ನಾಟಕ, ಬೆಂಗಳೂರು 1 ನಲ್ಲಿ ಇದರ ಸೇವೆ ಲಾಭ ಪಡೆಯಬಹುದಾಗಿತ್ತು, ಈಗ ಬಾಪೂಜಿ ಸೇವಾ ಕೇಂದ್ರವನ್ನು ಸೇರಿಸಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಸರ್ಕಾರದ ಯೋಜನೆಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುವ ಆಸಕ್ತಿ ಇರುವವರಿಗೆ ಪ್ರಜಾಪ್ರತಿನಿಧಿ ಮಾಡುತ್ತೇವೆ ಎಂದರು.

ಮಹಿಳೆಯರಿಗೆ ಯಾವ ಖಾತೆಗೆ ಬೇಕೋ ಅದೇ ಅಕೌಂಟ್ ಗೆ ಹಣ ನೀಡುತ್ತೇವೆ, ನಿನ್ನೆ ಕೆಲವು ಬದಲಾವಣೆ ಮಾಡಿದ್ದೇವೆ. ಅಧಿಕಾರಿಗಳು ಈಗಾಗಲೇ ಸಾಫ್ಟ್ವೇರ್ ರೆಡಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಯೋಜನೆಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next