Advertisement

ವಸತಿ ಶಾಲೆ ಉದ್ಘಾಟನೆ ವಿಳಂಬ

12:36 PM Dec 13, 2021 | Team Udayavani |

ಕುಕನೂರು: ತಾಲೂಕಿನ ಮಂಗಳೂರು-ರ್ಯಾವಣಕಿ ಮಧ್ಯೆದಲ್ಲಿ ಇಂದಿರಾ ಗಾಂಧಿ  ವಸತಿ ಶಾಲೆ ಕಟ್ಟಡ ನಿರ್ಮಾಣವಾಗಿ ಬರೊಬ್ಬರಿ 2 ವರ್ಷಗಳೇ ಗತಿಸಿವೆ.ಆದರೂ ಉದ್ಘಾಟನೆ ಭಾಗ್ಯವನ್ನೇ ಕಂಡಿಲ್ಲ. ಈಗಲೂವಸತಿ ನಿಲಯದ ವಿದ್ಯಾರ್ಥಿಗಳು ಬಾಡಿಗೆ ಕಟ್ಟಡದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಬಾಡಿಗೆ ಕಟ್ಟಡದಲ್ಲಿ ಸರಿಯಾದ ಸೌಲಭ್ಯಗಳು ಇಲ್ಲ ಎನ್ನುವ ಆಪಾದನೆ ಕೇಳಿ ಬಂದಿವೆ.

Advertisement

ಬಡ ವಿದ್ಯಾರ್ಥಿಗಳಿಗೆ ನೆರವಾಗಲಿ, ಅವರಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ. ಯಾವುದೇಆರ್ಥಿಕತೆಯ ಸಮಸ್ಯೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸದ ಮೇಲೆ ಪರಿಣಾಮ ಬೀರದಿರಲಿ ಎಂಬಉದ್ದೇಶದಿಂದಾಗಿ ಸರ್ಕಾರವು ವಸತಿ ನಿಲಯದಪರಿಕಲ್ಪನೆ ಜಾರಿ ತಂದಿದೆ. ಅದರಂತೆ 2016-17ರಲ್ಲಿ ಮಂಗಳೂರು ಹಾಗೂ ರ್ಯಾವಣಕಿ ಮಧ್ಯ ಇಂದಿರಾ ಗಾಂಧಿ ವಸತಿ ಶಾಲೆ ಮಂಜೂರು ಮಾಡಿದೆ. ಕಟ್ಟಡ ನಿರ್ಮಾಣವಾಗಿ ಬರೊಬ್ಬರಿ ಎರಡು ವರ್ಷ ಗತಿಸಿವೆ.ಆದರೆ ಆ ಶಾಲೆಯ ವಿದ್ಯಾರ್ಥಿಗಳು ಇಂದಿಗೂ ಬಾಡಿಗೆ ಕಟ್ಟಡದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ.

ಸ್ವಂತ ಕಟ್ಟಡವಿದ್ದರೂ ಬಾಡಿಗೆ ಯಾಕೆ?: ಪ್ರಸ್ತುತ ಕುಕನೂರಿನ ಖಾಸಗಿ ಗೋದಾಮಿನಲ್ಲಿ ವಸತಿ ಶಾಲೆ6ರಿಂದ 10ನೇ ತರಗತಿವರೆಗೂ 245 ವಿದ್ಯಾರ್ಥಿಗಳುಅಭ್ಯಾಸ ಮಾಡುತ್ತಿದ್ದಾರೆ. ಇದರಲ್ಲೇ ನಾಲ್ಕು ವಿಭಾಗ ಮಾಡಿ ಒಂದೊಂದು ಕಡೆ ವಿದ್ಯಾರ್ಥಿಗಳಿಗೆ ಮತ್ತೂಂದು ಕಡೆ ವಿದ್ಯಾರ್ಥಿನಿಯರಿಗೆ ಪಾಠ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರು ಇರುವ ಗೋದಾಮಿನ ಪಕ್ಕದಲ್ಲಿಅಡುಗೆ ಕೋಣೆಯಿದೆ. ಊಟ ತಯಾರಿಸುವಾಗ ಹೊಗೆಬರುತ್ತದೆ. ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೂ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳಿರುವ ಸ್ಥಳದಪಕ್ಕದಲ್ಲಿ ಶೌಚಾಲಯ ಮತ್ತು ಸ್ನಾನಗೃಹಗಳಿದ್ದು,ದರ್ವಾಸನೆ ಮಧ್ಯೆ ಅಭ್ಯಾಸ ಮಾಡಬೇಕಿದೆ. ಮಕ್ಕಳಿಗೆಆಟದ ಮೈದಾನವಿಲ್ಲ. ತಗಡಿನ ಮೇಲ್ಛಾವಣಿ ಕೆಳಗೆಮಕ್ಕಳು ಮಳೆ, ಬಿಸಿಲು, ಚಳಿಗಾಲದಲ್ಲಿ ಅಭ್ಯಾಸ ಮಾಡಬೇಕಾಗಿದೆ.

ತರಗತಿ ನಡೆಯುವ ವೇಳೆ ಕೋತಿಗಳು ತಗಡಿನ ಮೇಲೆ ಹಾರಾಡಿದರೆ ಬೆಚ್ಚಿ ಬೀಳುವಂತಾಗುತ್ತದೆ. ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕೋಟಿ ಕೋಟಿಖರ್ಚು ಮಾಡುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಸ್ವಂತಕಟ್ಟಡವೂ ನಿರ್ಮಾಣವಾಗಿದೆ. ಆದರೆ ಅಲ್ಲಿಗೆ ತೆರಳಿ ಅಭ್ಯಾಸ ಮಾಡುವಂತಿಲ್ಲ. ಏಕೆಂದರೆ ಕಟ್ಟಡವನ್ನು ಇನ್ನು ಇಲಾಖೆಗೆ ಹಸ್ತಾಂತರ ಮಾಡಿಲ್ಲ. ಹಾಗಾಗಿ ಸರ್ಕಾರಿಕಟ್ಟಡ ಉದ್ಘಾಟನೆಯ ಭಾಗ್ಯವನ್ನು ಕಂಡಿಲ್ಲ. ಇನ್ನು ವಸತಿ ಶಾಲೆಗೆ ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕಟ್ಟಡದಲ್ಲಿ ಇನ್ನೂ ಮುಂದುವರಿಯುತ್ತಿರುವುದು ಏಕೆ? ಎನ್ನುವ ಅನುಮಾನ ಮೂಡಿದೆ. ಇಲ್ಲಿ ಬಾಡಿಗೆ ಕಟ್ಟಡಕ್ಕೆ ಸರ್ಕಾರಎರಡು ವರ್ಷದಿಂದ ಸುಮ್ಮನೆ ಲಕ್ಷಾಂತರ ರೂ. ವ್ಯಯಿಸುವುದು ಮಾತ್ರ ಸುಳ್ಳಲ್ಲ. ಜಿಲ್ಲಾ ಮಂತ್ರಿಗಳು, ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟ ತಪ್ಪಿಸಬೇಕಿದೆ.ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ಇರುವ ಸ್ವಂತ ಸರ್ಕಾರಿಕಟ್ಟಡವನ್ನು ಉದ್ಘಾಟಿಸಿ ಅವರ ಶಿಕ್ಷಣಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕಿದೆ.

 

Advertisement

ಕಟ್ಟಡ ಕಾಮಗಾರಿ ಮುಗಿದು ಎರಡು ವರ್ಷಕಳೆದಿವೆ. ನಾವು ಇಲಾಖೆಗೆ ಕಟ್ಟಡಹಸ್ತಾಂತರಿಸಲು ತೆರಳಿದರೆ ಅವರು ತೆಗೆದುಕೊಳ್ಳುತ್ತಿಲ್ಲ. ಬೇಕಿದ್ದರೆ ನಮ್ಮ ಕಟ್ಟಡದ ಕಾಮಗಾರಿ ಕಳಪೆಯಾಗಿದ್ದರೆ ಅದನ್ನುಪರಿಶೀಲನೆ ಮಾಡಲಿ. ಅವರು ಏಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಮಗೂ ಗೊತ್ತಿಲ್ಲ.  –ಪ್ರವೀಣ, ಗುತ್ತಿಗೆದಾರ

 

ವಸತಿ ಶಾಲೆ ನಿರ್ಮಾಣಗೊಂಡಿರುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಚುನಾವಣೆ ಮುಗಿದ ತಕ್ಷಣ ಉದ್ಘಾಟನೆ ದಿನಾಂಕ ನಿಗದಿಗೊಳಿಸಿ ಪ್ರಾರಂಭಿಸುವ ಸಿದ್ಧತೆ ನಡೆದಿದೆ.– ರವಿಶಂಕರ್‌, ಎಇಇ

 

ವಸತಿ ಶಾಲೆ ಕಟ್ಟಡ ನಿರ್ಮಾಣದ ಕಾಮಗಾರಿ ಮುಗಿದಿದೆ ಎಂದು ಗುತ್ತಿಗೆದಾರರು ಹೇಳಿದ್ದಾರೆ. ನಾವೂ ಸಹ ಬಾಡಿಗೆ ಕಟ್ಟಡದಲ್ಲಿನ ಸಮಸ್ಯೆಗಳ ಕುರಿತು ಜಿಲ್ಲಾ ಅಧಿಕಾರಿಗಳ ಗಮನಕ್ಕೆತಂದಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಲೋಕಾರ್ಪಣೆ ದಿನಾಂಕ ನೀಡಲಾಗುವುದು ಎಂದು ತಿಳಿಸಿದ್ದಾರೆ. -ಗುರುಪಾದಪ್ಪ ಸೂಡಿ, ವಸತಿ ಶಾಲೆ ಪ್ರಾಚಾರ್ಯ

-ಬಸವರಾಜ ಕೊನ್ನಾರಿ

Advertisement

Udayavani is now on Telegram. Click here to join our channel and stay updated with the latest news.

Next