Advertisement

ಗೋಪಾಡಿ ಸಂಪೂರ್ಣ ಶಿಥಿಲಗೊಂಡ ಓವರ್‌ ಹೆಡ್‌ ಟ್ಯಾಂಕ್‌ ತೆರವು ವಿಳಂಬ

11:05 PM Jul 12, 2019 | Team Udayavani |

ಕೋಟೇಶ್ವರ: ಗೋಪಾಡಿಯ ರಾ.ಹೆದ್ದಾರಿಯ ತಿರುವಿನಲ್ಲಿರು ನಿರುಪಯೋಗಿ ನೀರು ಸರಬರಾಜು ಟ್ಯಾಂಕ್‌ ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಕುಸಿದು ಬೀಳುವ ಸ್ಥಿತಿಯಲ್ಲಿದ್ದು ಇದನ್ನು ತೆರವು ಗೊಳಿಸದಿದ್ದಲ್ಲಿ ಸನಿಹದಲ್ಲೇ ವಾಸವಾಗಿರುವ ಬಡಕುಟುಂಬವು ಭಯದ ವಾತವರಣದಲ್ಲಿ ಕಾಲಕಳೆಯ ಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 2983-1984ರ ಕಾಲಘಟ್ಟದಲ್ಲಿ ನಿರ್ಮಸಲಾಗಿರುವ ಓವರ್‌ ಹೆಡ್‌ ಟ್ಯಾಂಕ್‌ ಅಂದು ಬೀಜಾಡಿ-ಗೋಪಾಡಿ ಪಂಚಾಯತ್‌ ವ್ಯಾಪ್ತಿಯ ನಿವಾಸಿಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆಯಾಗಿತ್ತು. ಆದರೆ ಬೀಜಾಡಿ ಹಾಗೂ ಗೋಪಾಡಿ ಗ್ರಾ.ಪಂ ಪ್ರತ್ಯೇಕವಾದ ನಂತರ ಈ ಓವರ್‌ ಹೆಡ್‌ ವಾಟರ್‌ ಟ್ಯಾಂಕ್‌ ನೀರಿನ ಬಳಕೆ ಕಡಿಮೆಯಾಯಿತು. ಎರಡು ಗ್ರಾ.ಪಂಗಳು ಪ್ರತ್ಯೇಕ ವಾಟರ್‌ ಟ್ಯಾಂಕ್‌ ನಿರ್ಮಿಸಿದವು.

ಶಿಥಿಲಗೊಂಡ ವಾಟರ್‌ ಟ್ಯಾಂಕ್‌ ತೆರವಿಗ್ಯಾಕೆ ವಿಳಂಬ
ಸ್ಥಳೀಯ ನಿವಾಸಿಗಳು ಗ್ರಾ.ಪಂ ಸಹಿತ ಜಿಲ್ಲಾಡಳಿತದ ಗಮನಸೆಳೆದಿದ್ದರೂ ಅದನ್ನು ತೆರವುಗೊಳಿಸು ಇಲಾಖೆ ಮೀನಾ ಮೇಷ ತೋರುತ್ತಿರುವುದು ನಿರ್ಲಕ್ಷ್ಯ ತನಕ್ಕೆ ಹಿಡಿದ ಕನ್ನಡಿಯಾಗಿದೆ. ಪರ್ಯಾಯ ವ್ಯವಸ್ಥೆಗೊಳಿಸದಿದ್ದಲ್ಲಿ ಅಷ್ಟೊಂದು ಎತ್ತರದ ಸಂಪೂರ್ಣ ಶಿಥಿಲಗೊಂಡ ಗಾಳಿಗೆ ನಲುಗುತ್ತಿರುವ ವಾಟರ್‌ ಟ್ಯಾಂಕ್‌ ಇನ್ನೇನು ದಿನಗಳಿಲ್ಲಿ ಕುಸಿದು ಬಿದ್ದು ಭಾರೀ ದುರಂತಕ್ಕೆ ಎಡೆಮಾಡಲಿದೆ.

ತುರ್ತು ಕ್ರಮ ಕೈಗೊಳ್ಳಿ
ಅದೆಷ್ಟೋ ಬಾರಿ ಜಿಲ್ಲಾಡಳಿತದ ಗಮನ ಸೆಳೆದಿದ್ದರೂ ಈ ವರೆಗೆ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಇನ್ನಾದರೂ ಕ್ರಮ ಕೈಗೊಳ್ಳದಿದ್ದಲ್ಲಿ ದುರಂತ ಖಂಡಿತ.
-ರಾಜು, ಬೆಟ್ಟಿನ ಮನೆ, ಗ್ರಾಮಸ್ಥರು

ಆರ್ಥಿಕ ಸಂಪನ್ಮೂಲ ಕೊರತೆ
ಜಿಲ್ಲಾ ಧಿಕಾರಿಗಳೂ ಸಹಿತ ಸಂಬಂಧ ಪಟ್ಟ ಇಲಾಖೆಗಳ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿ ವಾಟರ್‌ ಟ್ಯಾಂಕ್‌ ತೆರವುಗೊಳಿಸಲು ಸುಮಾರು 3 ಲಕ್ಷ ರೂ. ವೆಚ್ಚ ತಗಲುವುದು ಎಂದು ಅಂದಾಜಿಸಲಾಗಿದೆ. ಅಷ್ಟೊಂದು ಖರ್ಚು ನಿಭಾಯಿಸಲು ಆರ್ಥಿಕ ಸಂಪನ್ಮೂಲ ಕೊರತೆಯಿದೆ.
– ಸರಸ್ವತಿ ಪುತ್ರನ್‌, ಅಧ್ಯಕ್ಷರು, ಗೋಪಾಡಿ ಗ್ರಾ.ಪಂ.

Advertisement

ಪೂರಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಬದ್ಧ
ತೆರವು ಕಾಮಗಾರಿಯ ನಿರ್ವಹಣೆ ಪಂಚಾಯಿತ್‌ ವಹಿಸಬೇಕು. ಅದಕ್ಕೇ ಪೂರಕ ವ್ಯವಸ್ಥೆ ಒದಗಿಸುವಲ್ಲಿ ಜಿಲ್ಲಾಡಳಿತ ಬದ್ಧ.
-ಸಿಂಧು ಬಿ.ರೂಪೇಶ್‌, ಸಿ.ಎಸ್‌., ಜಿಲ್ಲಾಡಳಿತ

Advertisement

Udayavani is now on Telegram. Click here to join our channel and stay updated with the latest news.

Next