Advertisement
ಇಲ್ಲಿನ ವಿಶೇಷತೆ ಉದ್ಭವಲಿಂಗ ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವೈವಾಹಿಕ ಸಂಬಂಧ ಕೂಡುವಿಕೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೋಡುವ ಸಂಪ್ರದಾಯವಿದ್ದು, ಅನಂತರ ಮದುವೆಯಾದ ನವ ಜೋಡಿಗಳು ಬಂದು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳುತ್ತಾರೆ.
ಮಹಾ ಶಿವರಾತ್ರಿ ಮಹೋತ್ಸವ ಅಂಗವಾಗಿ ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ, ನಾಗಬನ, ಬಸವ ಮಂಟಪ ಸೇರಿದಂತೆ ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಹರಿದು ಬಂದ ಭಕ್ತ ಸಾಗರ
ಜಿಲ್ಲೆ ಯ ಮೂಲೆ ಮೂಲೆಯಿಂದಲೂ ಮುಂಜಾನೆಯಿಂದಲೇ ಸಹಸ್ರಾರು ಭಕ್ತರು ಶ್ರೀ ಸನ್ನಿಧಿಯಲ್ಲಿ ನೆರೆದಿದ್ದು ದೇವರಿಗೆ ವಿಶೇಷವಾಗಿ ಸಿಂಗಾರ ಹೂವಿನ ಸಮರ್ಪಣೆ ಹಾಗೂ ವಿಶೇಷವಾಗಿ ತುಲಾಭಾರ ಸೇವೆ ನಡೆದಿದ್ದು, ಸುಮಾರು 7 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.