Advertisement

Tourist Spot ಅಭಿವೃದ್ಧಿಗೆ ವಿಶೇಷ ಯೋಜನೆ: “ದೇಕೋ ಅಪ್ನಾ ದೇಶ್‌, ಪೀಪಲ್ಸ್‌ ಚಾಯ್ಸ್ -2024′

11:52 PM Aug 25, 2024 | Team Udayavani |

ಮಂಗಳೂರು: ಪ್ರವಾಸೋದ್ಯಮವನ್ನು ಮೇಲ್ದರ್ಜೆ ಗೇರಿಸಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಟಿಕೋನದಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ, ವಿಶ್ವ ದರ್ಜೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ “ದೇಕೋ ಅಪ್ನಾ ದೇಶ್‌, ಪೀಪಲ್ಸ್‌ ಚಾಯ್ಸ -2024′ ಕಾರ್ಯಕ್ರಮ ಪ್ರಾರಂಭಿಸಿದೆ.

Advertisement

ಕಾರ್ಯಕ್ರಮದ ಭಾಗವಾಗಿ ನಾಗರಿಕರು ಹಾಗೂ ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಮೈ ಗವರ್ನಮೆಂಟ್‌ ವೇದಿಕೆಯಡಿ ಅವಕಾಶ ಕಲ್ಪಿಸಲಾಗಿದೆ. ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಸೆ.15ರ ವರೆಗೆ ಮತ ನೀಡುವ ಅವಕಾಶ ಕಲ್ಪಿಸಲಾಗಿದೆ.

ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ಪ್ರವಾಸಿ ತಾಣಗಳನ್ನು ಆದ್ಯತಾ ಪ್ರವಾಸಿ ತಾಣಗಳನ್ನಾಗಿ ಆಯ್ಕೆ ಮಾಡಲು ತಾವು ಈಗಾಗಲೇ ಭೇಟಿ ನೀಡಿರುವ ಕನಿಷ್ಠ ಒಂದು ಪ್ರೇಕ್ಷಣೀಯ ಸ್ಥಳವನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ ಮತ್ತು ತಾವು ಭವಿಷ್ಯದಲ್ಲಿ ಭೇಟಿ ನೀಡಲು ಬಯಸುವ ಕನಿಷ್ಠ ಒಂದು ಪ್ರೇಕ್ಷಣೀಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.

ಈ ವೇಳೆ ಲಿಂಕ್‌ನಲ್ಲಿ ತಮ್ಮ ಮೊಬೈಲ್‌ ನಂಬರ್‌, ಹೆಸರು, ವಯಸ್ಸು, ರಾಜ್ಯ ಸಹಿತ ಪ್ರಾಥಮಿಕ ಮಾಹಿತಿಯನ್ನು ತುಂಬಿ ಒಟಿಪಿ ಮೂಲಕ ಲಾಗಿನ್‌ ಆಗಿ ದೇಶದ ಯಾವುದೇ ಪ್ರವಾಸಿ ಸ್ಥಳದ ಕುರಿತು ವೋಟ್‌ ಮಾಡಬಹುದಾಗಿದೆ. ದೇಶದ ಹಲವು ಪ್ರವಾಸಿ ತಾಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಸೇರಿಸಲಾಗಿದೆ.

ಇದರಿಂದ ಗುರುತಿಸಲಾದ ವಿಜೇತ ಪ್ರೇಕ್ಷಣೀಯ ತಾಣಗಳನ್ನು ಭಾರತ ಸರಕಾರದ ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿ ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುವುದರೊಂದಿಗೆ ಇದು ಭಾರತದ ವೀಕ್ಷಿತ್‌ ಭಾರತ್‌-2047 ಕಡೆ ಪ್ರಯಾಣಕ್ಕೆ ಕೊಡುಗೆ ನೀಡುತ್ತದೆ.

Advertisement

ವೋಟಿಂಗ್‌ನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಕೇಂದ್ರ ಸರಕಾರದಿಂದ ಅವರ ಹೆಸರಿನಲ್ಲಿ ಇ-ಪ್ರಮಾಣ ಪತ್ರ ನೀಡಲಾಗುತ್ತದೆ. ಸಾರ್ವಜನಿಕರು //https;//innovateindia.mygov.in/dekho-apna-desh/login/ ವೆಬ್‌ ಲಿಂಕ್‌ ಬಳಸಿ ಜಿಲ್ಲೆಯ ಮೆಚ್ಚಿನ ಪ್ರವಾಸಿ ತಾಣದ ಕುರಿತು ವೋಟ್‌ ಮಾಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next