ನವದೆಹಲಿ: ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟಿರುವ ಪ್ರತಿಪಕ್ಷಗಳು ಈಗ ಭಾರತದ ಆತ್ಮದ ಮೇಲೆ ನೇರ ದಾಳಿ ಮಾಡುತ್ತಿದ್ದು, ಶ್ರಮವಹಿಸಿ ದುಡಿಯುತ್ತಿರುವ ನಾಗರಿಕರನ್ನು ನಿಂದಿಸಲು ಆರಂಭಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ದ್ವೇಷ ಭಾಷಣಗಳು ಮತ್ತು ಕೋಮು ಹಿಂಸಾಚಾರದಂತಹ ಪ್ರಕರಣಗಳ ಕುರಿತು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಪಕ್ಷಗಳು ಹೊರಡಿಸಿದ ಜಂಟಿ ಪ್ರಕಟಣೆಗೆ ನಡ್ಡಾ ಈ ರೀತಿ ಕಿಡಿಕಾರಿದ್ದಾರೆ.
ದೇಶವಾಸಿಗಳಿಗೆ ಪತ್ರ ಬರೆದಿರುವ ಅವರು, ಪ್ರತಿಪಕ್ಷಗಳ ಮತ ಬ್ಯಾಂಕ್ ರಾಜಕಾರಣ, ವಿಭಜನಾತ್ಮಕ ರಾಜಕೀಯ, ಆಯ್ಕೆಯ ರಾಜಕಾರಣ ಇನ್ನು ಮುಂದೆ ಕೆಲಸ ಮಾಡುವುದಿಲ್ಲ.
ಇದನ್ನೂ ಓದಿ:ವಿಧಾನಸಭಾ ಚುನಾವಣೆಗೆ 50 ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ: ಶ್ರೀ ಬ್ರಹ್ಮಾನಂದ ಸರಸ್ವತಿ
ಪ್ರಧಾನಿ ಮೋದಿ ಅವರ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಮತ್ತು ಸಬ್‌ಕಾ ಪ್ರಯಾಸ್ ಮಂತ್ರದಿಂದಾಗಿ ಭಾರತೀಯರು ಈಗ ಸಬಲರಾಗಿದ್ದು, ಮತ್ತಷ್ಟು ಮೇಲಕ್ಕೇರಲು ಅವರಿಗೆ ರೆಕ್ಕೆ ಸಿಕ್ಕಂತಾಗಿದೆ.
ದುರದೃಷ್ಟವಶಾತ್, ಭಾರತದ ಈ ಅಭಿವೃದ್ಧಿ ರಾಜಕಾರಣವನ್ನು ಸಹಿಸಲಾಗದೆ, ಈ ತಿರಸ್ಕೃತ ಪ್ರತಿಪಕ್ಷಗಳು ಮತ್ತೆ ತಮ್ಮ ಹಳೆಯ ಮತಬ್ಯಾಂಕ್ ಹಾಗೂ ವಿಭಜನಾತ್ಮಕ ರಾಜಕೀಯದಡಿ ಆಶ್ರಯ ಪಡೆಯಲು ಯತ್ನಿಸುತ್ತಿವೆ ಎಂದೂ ನಡ್ಡಾ ಆರೋಪಿಸಿದ್ದಾರೆ.