Advertisement

ಶಾಖೋತ್ಪನ್ನ ಕೇಂದ್ರ ಹಸಿಬೂದಿಗೆ ನಿರ್ಜಲೀಕರಣ ಮದ್ದು!

10:42 PM Sep 24, 2019 | Lakshmi GovindaRaju |

ರಾಯಚೂರು: ಕಲ್ಲಿದ್ದಲು ಬಳಸಿ ವಿದ್ಯುತ್‌ ಉತ್ಪಾದಿಸುತ್ತಿರುವ ಶಾಖೋತ್ಪನ್ನ ಕೇಂದ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಹಸಿಬೂದಿಗೆ (ವೆಟ್‌ ಆ್ಯಶ್‌) ಕಡಿವಾಣ ಹಾಕಲು ಕೆಪಿಸಿ ಹೊಸ ಕ್ರಮಕ್ಕೆ ಮುಂದಾಗಿದ್ದು, ಶಾಖೋತ್ಪನ್ನ ಕೇಂದ್ರಗಳಲ್ಲಿ ನಿರ್ಜಲೀಕರಣ ಘಟಕ ಅಳವಡಿ ಸುವ ಮೂಲಕ ಹಸಿ ಬೂದಿ ಉತ್ಪಾದನೆಯನ್ನೇ ತಡೆಯುವ ಚಿಂತನೆ ನಡೆಸಿದೆ.

Advertisement

ಜಾರ್ಖಂಡ್‌ನ‌ ಶಾಖೋತ್ಪನ್ನ ಕೇಂದ್ರವೊಂದರಲ್ಲಿ ಈಗಾಗಲೇ ಇಂಥ ಯೋಜನೆ ಜಾರಿಗೊಳಿಸಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ. ಹೀಗಾಗಿ ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲೂ ಅದೇ ಮಾದರಿ ಅಳವಡಿಸುವ ಚಿಂತನೆ ಮಾಡಲಾಗಿದೆ. ಇದರಿಂದ ಹಸಿ ಬೂದಿ ಸಂಗ್ರಹ ಸಮಸ್ಯೆ ಜತೆಗೆ ಪರಿಸರದ ಮೇಲಾಗುವ ದುಷ್ಪರಿಣಾಮ ಕೂಡ ತಡೆಯಬಹುದು ಎನ್ನುತ್ತಾರೆ ಕೇಂದ್ರದ ಸಿಬ್ಬಂದಿ.

ರಾಯಚೂರು ಶಾಖೋತ್ಪನ್ನ ಕೇಂದ್ರಕ್ಕೆ ಹಸಿ ಬೂದಿ ಸಮಸ್ಯೆ ಎದುರಾಗಿ ಹಲವು ವರ್ಷಗಳೇ ಆಗಿದೆ. ಕೇಂದ್ರದ ಸಮೀಪದಲ್ಲಿ ನಿರ್ಮಿಸಿದ ಹೊಂಡ ಭರ್ತಿಯಾಗಿದೆ. ಮುಂದೆ ಆಗುವ ಅನಾಹುತ ತಪ್ಪಿಸಲು ಹೊಂಡದ ಎತ್ತರವನ್ನು ಐದು ಅಡಿಗೆ ಹೆಚ್ಚಿಸಲಾಗುತ್ತಿದೆ. ವೈಟಿಪಿಎಸ್‌ ಘಟಕದಿಂದ ಬರುವ ಒದ್ದೆ ಬೂದಿಯನ್ನೂ ಇದೇ ಹೊಂಡಕ್ಕೆ ಹರಿಸುತ್ತಿರುವುದಕ್ಕೆ ಸಮಸ್ಯೆ ಉಲ್ಬಣಿ ಸಿತ್ತು. ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಮಾರ್ಗ ಅನುಸರಿಲು ಮುಂದಾಗಿದೆ.

ಎರಡು ಘಟಕಕ್ಕೆ ಒಂದು ಯಂತ್ರ: ಶಾಖೋತ್ಪನ್ನ ಕೇಂದ್ರಗಳಲ್ಲಿ ವಿದ್ಯುತ್‌ ಉತ್ಪಾದನೆಗೆ ಬಳಕೆ ಯಾಗುವ ಕಲ್ಲಿದ್ದಲಿನಲ್ಲಿ ಶೇ.80 ಹಾರುಬೂದಿ ಬಂದರೆ, ಶೇ.20 ಹಸಿ ಬೂದಿ ಬರುತ್ತದೆ. ನಿರ್ಜಲೀಕರಣ ಯಂತ್ರಗಳ ಅಳವಡಿಕೆಯಿಂದ ಹಸಿ ಬೂದಿಯನ್ನೂ ಹಾರುಬೂದಿಯಾಗಿ ಪರಿವರ್ತಿಸಬಹುದು. ಅದರಿಂದ ಬರುವ ನೀರನ್ನು ಮರು ಬಳಕೆ ಮಾಡಬಹುದಾಗಿದ್ದು, ನೀರಿನ ಉಳಿತಾಯ ಕೂಡ ಮಾಡಿ ದಂತಾಗುತ್ತದೆ. ಆರ್‌ಟಿಪಿಎಸ್‌ನಲ್ಲಿ 8 ಘಟಕಗಳಿದ್ದು, ಪ್ರತಿ ಎರಡು ಘಟಕಕ್ಕೆ ಒಂದರಂತೆ ಈ ನಿರ್ಜಲೀಕರಣ ಯಂತ್ರ ಅಳವಡಿಸುವ ಚಿಂತನೆ ಮಾಡಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಭೂ ಸ್ವಾಧೀನ ಸಮಸ್ಯೆಗೂ ಮುಕ್ತಿ: 
ಯರಮರಸ್‌ ಸೂಪರ್‌ ಕ್ರಿಟಿಕಲ್‌ ಥರ್ಮಲ್‌ ಪವರ್‌ ಸ್ಟೇಶನ್‌ (ವೈಟಿಪಿಎಸ್‌) 1600 ಮೆಗಾವ್ಯಾಟ್‌ ಸಾಮರ್ಥ್ಯದ ಶಾಖೋತ್ಪನ್ನ ಕೇಂದ್ರವಾಗಿದ್ದು, ಇಲ್ಲೂ ಕಲ್ಲಿದ್ದಲು ಬಳಸಲಾಗುತ್ತದೆ. ಆದರೆ, ಇಲ್ಲಿ ಉತ್ಪಾದನೆಯಾಗುವ ಬೂದಿ ಸಂಗ್ರಹಿಸಲು ಪ್ರತ್ಯೇಕ ಹೊಂಡ ನಿರ್ಮಿಸಿಲ್ಲ. ಅದಕ್ಕಾಗಿ 100 ಎಕರೆ ಭೂ ಸ್ವಾ ಧೀನ ಮಾಡುವ ಪ್ರಸ್ತಾವನೆಯೂ ಇದೆ. ಇದರಿಂದ ರೈತರಿಗೆ ಪರಿಹಾರ, ಉದ್ಯೋಗ ನೀಡುವ ಸಮಸ್ಯೆ ಎದುರಾಗಲಿದೆ. ಅದರ ಬದಲಿಗೆ ಹೊಸ ತಂತ್ರಜ್ಞಾನವನ್ನೇ ಅಳವಡಿಸಿದರೆ ಭೂ ಸ್ವಾಧಿಧೀನ ಸಮಸ್ಯೆಯೇ ಉಲ½ಣಿಸುವುದಿಲ್ಲ ಎನ್ನುವುದು ಅ ಧಿಕಾರಿಗಳ ಲೆಕ್ಕಾಚಾರ.

ಶಾಖೋತ್ಪನ್ನ ಕೇಂದ್ರಗಳಲ್ಲಿ ಉತ್ಪಾದನೆಯಾಗುವ ಹಸಿಬೂದಿಯನ್ನು ಸಂಪೂರ್ಣ ನಿಲ್ಲಿಸಬೇಕೆಂಬ ನಿಟ್ಟಿನಲ್ಲಿ ನಿರ್ಜಲೀಕರಣ ಯಂತ್ರಗಳ ಅಳವಡಿಕೆಗೆ ಅಧಿ ಕಾರಿಗಳು ಚಿಂತನೆ ನಡೆಸಿದ್ದಾರೆ. ಈಗಾಗಲೇ ಜಾರ್ಖಂಡ್‌ನ‌ಲ್ಲಿ ಇಂಥ ಪ್ರಯೋಗ ನಡೆದಿದ್ದು, ಅಧಿ ಕಾರಿಗಳ ತಂಡ ಅಧ್ಯಯನ ಮಾಡಿ ಬಂದಿದೆ. ಈ ಯೋಜನೆ ಇನ್ನೂ ಆರಂಭದ ಹಂತದಲ್ಲಿದೆ. ಇದರಿಂದ ಹಸಿ ಬೂದಿ ಉತ್ಪಾದನೆ ಸಂಪೂರ್ಣ ನಿಲ್ಲಲಿದ್ದು, ಅದರಿಂದ ಬರುವ ನೀರನ್ನು ಮರುಬಳಕೆ ಮಾಡಬಹುದು.
-ವೇಣುಗೋಪಾಲ, ಕಾರ್ಯನಿರ್ವಾಹಕ ನಿರ್ದೇಶಕ, ಆರ್‌ಟಿಪಿಎಸ್‌

Advertisement

* ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next