Advertisement

9 ಮಕ್ಕಳ ಅಪಹರಣ, ರೇಪ್‌, ಹತ್ಯೆಗೈದ ಸರಣಿ ಹಂತಕ ಕೊನೆಗೂ ಸೆರೆ

11:05 AM Nov 22, 2018 | Team Udayavani |

ಹೊಸದಿಲ್ಲಿ : ಮೂರರಿಂದ ಏಳು ವರ್ಷ ಪ್ರಾಯದ ಹೆಣ್ಣು ಮಕ್ಕಳನ್ನು ಅಪಹರಿಸಿ, ಅತ್ಯಮಾನುಷವಾಗಿ ಹಿಂಸಿಸಿ, ಅತ್ಯಾಚಾರಗೈದು ಕೊಲೆ ಮಾಡುತ್ತಿದ್ದ 20ರ ಹರೆಯದ ಸುನೀಲ್‌ ಕುಮಾರ್‌ ಎಂಬ ಮಕ್ಕಳ ಸರಣಿ ಹಂತಕನನ್ನು ಬಂಧಿಸುವಲ್ಲಿ ದಿಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. 

Advertisement

2016ರಿಂದ ಈ ತಾನು ಈ ರೀತಿಯಲ್ಲಿ  ಕನಿಷ್ಠ 9 ಹೆಣ್ಣು ಮಕ್ಕಳನ್ನು ಅಪಹರಿಸಿ, ಹಿಂಸಿಸಿ ಅತ್ಯಾಚಾರಗೈದು ಕೊಲೆ ಮಾಡಿರುವುದಾಗಿ ಆರೋಪಿ ಸುನೀಲ್‌ ಕುಮಾರ್‌ ಒಪ್ಪಿಕೊಂಡಿರುವುದಾಗಿ ಗುರುಗ್ರಾಮ ಪೊಲೀಸ್‌ ಠಾಣೆ ಸಹಾಯಕ ಎಸ್‌ ಐ ಮತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಸುಭಾಷ್‌ ಬೊಕೇನ್‌ ತಿಳಿಸಿದ್ದಾರೆ. 

ಸುನೀಲ್‌ ಕುಮಾರ್‌ ದಿಲ್ಲಿಯಲ್ಲಿ ನಾಲ್ಕು, ಗುರುಗ್ರಾಮದಲ್ಲಿ ಮೂರು, ಝಾನ್ಸಿ ಮತ್ತು ಗ್ವಾಲಿಯರ್‌ ನಲ್ಲಿ ತಲಾ ಒಬ್ಬರಂತೆ ಒಟ್ಟು 9 ಹೆಣ್ಣು ಮಕ್ಕಳನ್ನು ಅಪಹರಿಸಿ, ಕ್ರೂರವಾಗಿ ಹಿಂಸಿಸಿ, ಕೈಕಾಲು ಮುರಿದು, ಅತ್ಯಾಚಾರಗೈದು ಕೊಲೆ ಮಾಡಿರುವುದಾಗಿ ಬೊಕೇನ್‌ ಹೇಳಿದರು. 

ಕಳೆದ ನ.11ರಂದು ಗುರುಗ್ರಾಮದಲ್ಲಿ ಮೂರು ವರ್ಷದ ಪ್ರಾಯದ ಬಾಲಕಿಗೆ ಈತ ಚಾಕೋಲೇಟ್‌ ಆಸೆ ತೋರಿಸಿ ಅಪಹರಿಸಿ, ಹಿಂಸಿಸಿ, ಅತ್ಯಾಚಾರಗೈದು ಕೊಂದಿರುವುದು ತಾಜಾ ಪ್ರಕರಣವಾಗಿದೆ. 

ಈ ಬಾಲಕಿಯ ನಗ್ನ ಶವ ಸೆಕ್ಟರ್‌66ರ ಕೊಳೆಗೇರಿಯೊಂದರ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿತ್ತು. 

Advertisement

ಈ ಘಟನೆಯನ್ನು ಅನುಸರಿಸಿ ಪೊಲೀಸರು ಆರೋಪಿಯನ್ನು ಹಿಡಿಯಲು ಮೂರು ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಿ ಅಂತಿಮವಾಗಿ ಆತನನ್ನು ಆತನ ಹುಟ್ಟೂರಾದ ಝಾನ್ಸಿ ಜಿಲ್ಲೆಯ ಗ್ರಾಮದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಈತ ತನ್ನ ತಾಯಿ ಮತ್ತು ಸಹೋದರಿಯನ್ನು ಕಾಣಲು ಗುರುಗ್ರಾಮಕ್ಕೆ ಬಂದು ಆ ಬಳಿಕ ಒಡನೆಯೇ ಹುಟ್ಟೂರಿಗೆ ಪಲಾಯನ ಮಾಡಿದ್ದ. 

ಅಪರೂಪಕ್ಕೆ ಕೂಲಿ ಕಾರ್ಮಿಕನಾಗಿ ದುಡಿಯುತ್ತಾ ಸಮುದಾಯ ಭವನದಲ್ಲಿ ಊಟ ಮಾಡಿಕೊಂಡು ಪಾರ್ಕುಗಳಲ್ಲಿ ಮಲಗಿಕೊಂಡು ಕಾಲ ಕಳೆಯುತ್ತಾ 3ರಿಂದ 7 ವರ್ಷ ಪ್ರಾಯದ ಹೆಣ್ಣು ಮಕ್ಕಳನ್ನು ಹೊಂಚು ಹಾಕಿ ಅಪಹರಿಸಿ, ಇಟ್ಟಿಗೆಯಿಂದ ಅವರ ಕೈಕಾಲು ಮುರಿದು, ಬಾಯಿಗೆ ಪ್ಲಾಸ್ಟಿಕ್‌ ಬಿಗಿದ್ದು ಅತ್ಯಾಚಾರ ಮಾಡಿ ಬಳಿಕ ಕೊಂದು ಹಾಕುತ್ತಿದ್ದ ಸುನೀಲ್‌ ಕುಮಾರ್‌ ನನ್ನು ನ್ಯಾಯಾಲಯ 8 ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ. ಆತನ ಈ ಹಿಂದಿನ 9 ಅತ್ಯಾಚಾರ-ಕೊಲೆ ಕೇಸುಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next