Advertisement

ಕಳರಿ ಪಯಟ್ಟು ಸುತ್ತ ದೇಹಿ

10:57 AM Jan 18, 2020 | mahesh |

ದಕ್ಷಿಣ ಭಾರತದಲ್ಲಿ ಅದರಲ್ಲೂ ಕೇರಳದಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಮರ ಕಲೆ “ಕಳರಿ ಪಯಟ್ಟು’ ಬಗ್ಗೆ ಬಹುತೇಕರಿಗೆ ತಿಳಿದಿದೆ. ಈಗ ಇದೇ “ಕಳರಿ ಪಯಟ್ಟು’ ಸಮರ ಕಲೆಯನ್ನು ಆಧರಿಸಿ “ದೇಹಿ’ ಎನ್ನುವ ಹೆಸರಿನಲ್ಲಿ ಚಿತ್ರವೊಂದು ಬೆಳ್ಳಿತೆರೆಗೆ ಬರುತ್ತಿದೆ. ಸುಮಾರು ಎರಡೂವರೆ ದಶಕಗಳಿಂದ ಬೆಂಗಳೂರಿನಲ್ಲಿ “ಕಳರಿ ಗುರುಕುಲ’ದ ಮೂಲಕ “ಕಳರಿ ಪಯಟ್ಟು’ ಕಲೆಯನ್ನು ಪೋಷಿಸಿಕೊಂಡು ಬರುತ್ತಿರುವ ರಂಜನ್‌ ಮುಲ್ಲಾರತ್‌ ಈ ಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.

Advertisement

ದೇಹಿ’ ಚಿತ್ರ, ಇದೇ ಮಾರ್ಚ್‌ ವೇಳೆಗೆ ತೆರೆಗೆ ಬರಲು ತಯಾರಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಹೊರತಂದಿದೆ.

ನಟ ವಿಜಯ ರಾಘವೇಂದ್ರ, ಸಂಗೀತ ನಿರ್ದೇಶಕ ನೋಬಿನ್‌ ಪೌಲ್‌, ನಿರ್ಮಾಪಕ ರಂಜನ್‌ ಮುಲ್ಲಾರತ್‌ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಮತ್ತು ಚಿತ್ರತಂಡದ ಸಮ್ಮುಖದಲ್ಲಿ “ದೇಹಿ’ ಹಾಡುಗಳು ಬಿಡುಗಡೆಯಾಯಿತು. ಇದೇ ವೇಳೆ ಮಾತನಾಡಿದ ನಟ ವಿಜಯ ರಾಘವೇಂದ್ರ, “ನಮ್ಮ ದೇಶದ ಪ್ರಾಚೀನ ಸಮರ ಕಲೆಯನ್ನು ಸಿನಿಮಾ ರೂಪದಲ್ಲಿ ತೆರೆಗೆ ತರುತ್ತಿರುವ ಪ್ರಯತ್ನ ಶ್ಲಾಘನೀಯ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಹಲ್ಲೆ, ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು “ಕಳರಿ ಪಯಟ್ಟು’ನಂಥ ಕಲೆ ತುಂಬಾ ಸಹಕಾರಿ’ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ರಂಜಿತ್‌ ಮುಲ್ಲಾರತ್‌, “ಕಳರಿ ಪಯಟ್ಟು ದೇಹ ಮತ್ತು ಆತ್ಮ ಎರಡನ್ನೂ ಬೆಸೆಯುವ ಮತ್ತು ಎರಡಕ್ಕೂ ಸಂಬಂಧಿಸಿದ ಕಲೆ. ಹಾಗಾಗಿ, ಇದನ್ನು ಮದರ್‌ ಆಫ್ ಮಾರ್ಷಲ್‌ ಆರ್ಟ್ಸ್ ಅಂತಾನೇ ಕರೆಯುತ್ತಾರೆ. ಈ ಕಲೆಯ ಮಹತ್ವದ ಮತ್ತು ಅದರ ಬಗ್ಗೆ ಅರಿವು ಮೂಡಿಸಲು ಇದರ ಮೇಲೆ ಸಿನಿಮಾ ಮಾಡುವ ಯೋಜನೆಗೆ ಕೈ ಹಾಕಿದೆವು. ಸದ್ಯ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ. ಈ ಚಿತ್ರದಿಂದ “ಕಲಾರಿ ಪಯಟ್ಟು’ ಮಹತ್ವ ನೋಡುಗರಿಗೆ ಅರ್ಥವಾದರೆ ನಮ್ಮ ಪ್ರಯತ್ನ ಸಾರ್ಥಕ’ ಎಂದರು.

“ದೇಹಿ’ ಚಿತ್ರದಲ್ಲಿ ಬಹುಭಾಷಾ ನಟ ಕಿಶೋರ್‌, ಉಪಾಸನಾ ಗುರ್ಜರ್‌ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಬಿ. ಜಯ ಮೋಹನ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಧನ “ದೇಹಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next