Advertisement

ದೂರಶಿಕ್ಷಣದ ಮೂಲಕ ಪಡೆದ ಪದವಿ ಸಾಂಪ್ರದಾಯಿಕ ಪದವಿಗೆ ಸಮ: ಯುಜಿಸಿ

08:15 PM Sep 09, 2022 | Team Udayavani |

ನವದೆಹಲಿ: ಇನ್ನು ಮುಂದೆ, ಮಾನ್ಯತೆ ಪಡೆದ ಸಂಸ್ಥೆಗಳಿಂದ ದೂರಶಿಕ್ಷಣದ ಮೂಲಕ ಅಥವಾ ಆನ್‌ಲೈನ್‌ ಶಿಕ್ಷಣದ ಮೂಲಕ ಪಡೆದ ಪದವಿಯನ್ನು ಸಾಂಪ್ರದಾಯಿಕ ವಿಧಾನದಲ್ಲಿ ನೀಡಲಾಗುವ ಪದವಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) ಹೇಳಿದೆ.

Advertisement

ಯುಜಿಸಿ ಅಧಿಸೂಚನೆಗೆ ಅನುಗುಣವಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಮುಕ್ತ ಮತ್ತು ದೂರಶಿಕ್ಷಣ ಅಥವಾ ಆನ್‌ಲೈನ್‌ ಮೂಲಕ ಯುಜಿ ಮತ್ತು ಪಿಜಿ ಮಟ್ಟದಲ್ಲಿ ನೀಡಲಾಗುವ ಪದವಿ, ಸ್ನಾತಕೋತ್ತರ ಡಿಪ್ಲೋಮಾವನ್ನು ಸಾಂಪ್ರದಾಯಿಕ ಮಾದರಿಯಲ್ಲಿ ನೀಡಲಾಗುವ ಪದವಿ ಮತ್ತು ಪಿಜಿ ಡಿಪ್ಲೋಮಾಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್‌ ಜೈನ ಹೇಳಿದ್ದಾರೆ.

ಯುಜಿಸಿಯ ನಿಬಂಧನೆ 22ರ ಅನ್ವಯ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next