Advertisement

ಅಕ್ಟೋಬರ್‌ 4ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ತರಗತಿಗಳು ಆರಂಭ : ಅಶ್ವತ್ಥನಾರಾಯಣ

12:30 AM Jan 20, 2021 | Team Udayavani |

ಬೆಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾಖೆ ಸಿದ್ಧಪಡಿಸಿದೆ. ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅಕ್ಟೋಬರ್‌ 4ರಿಂದ ಆರಂಭವಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋವಿಡ್‌ ಕಾರಣದಿಂದ 2021-22ನೇ ಸಾಲಿನ ಶೈಕ್ಷಣಿಕ ಚಟವಟಿಕೆಗಳಲ್ಲಿ ವ್ಯತ್ಯಯವಾಗಿದ್ದ ಹಿನ್ನೆಲೆಯಲ್ಲಿ ಆ ಎಲ್ಲ ಅಂಶಗಳನ್ನು ಪರಿಗಣಿಸಿ ಶೈಕ್ಷಣಿಕ ಕ್ಯಾಲೆಂಡರ್‌ ನ ಕರಡು ರೂಪಿಸಲಾಗಿದೆ ಎಂದರು.

ಪದವಿ ವಿಭಾಗ :

l 1, 3, 5ನೇ ಸೆಮಿಸ್ಟರ್‌: 2021ರ ಅ. 4ಕ್ಕೆ ಆರಂಭ.

l 2022ರ ಜ. 31ಕ್ಕೆ ಮುಕ್ತಾಯ

Advertisement

l ಪರೀಕ್ಷೆ ಮುಕ್ತಾಯ: 2022 ಫೆ. 28

l 2, 4, 6ನೇ ಸೆಮಿಸ್ಟರ್‌: 2022ರ ಮಾ. 1ಕ್ಕೆ ಆರಂಭ

l ಮುಕ್ತಾಯ: 2022 ಜೂ. 30

l ಪರೀಕ್ಷೆ ಮುಕ್ತಾಯ: 2022 ಜು. 31

l ಫಲಿತಾಂಶ: 2022ರ ಆ. 14

 

ಎಂಜಿನಿಯರಿಂಗ್‌ ವಿಭಾಗ :

l 1, 3, 5, 7ನೇ ಸೆಮಿಸ್ಟರ್‌ : 2021ರ ಅ. 4ರಂದು ಆರಂಭ

l 2022 ಜ. 31ಕ್ಕೆ ಮುಕ್ತಾಯ

l ಪರೀಕ್ಷೆ ಮುಕ್ತಾಯ: 2022 ಫೆ. 28

l 2, 4, 6, 8ನೇ ಸೆಮಿಸ್ಟರ್‌

2022ರ ಮಾ. 1ರಂದು ಆರಂಭ

l 2022 ಜೂ. 30ಕ್ಕೆ ಮುಕ್ತಾಯ

l ಪರೀಕ್ಷೆ ಮುಕ್ತಾಯ: 2022 ಜು. 31

l ಫ‌ಲಿತಾಂಶ: 2022ರ ಆ. 14

 

ಸ್ನಾತಕೋತ್ತರ ಪದವಿ :

l 1, 3ನೇ ಸೆಮಿಸ್ಟರ್‌: 2021ರ ಅ. 4ರಂದು ಆರಂಭ

l 2022 ಜ. 31ಕ್ಕೆ ಮುಕ್ತಾಯ

l ಪರೀಕ್ಷೆ ಮುಕ್ತಾಯ: 2022 ಫೆ. 28

l 2, 4ನೇ ಸೆಮಿಸ್ಟರ್‌: 2022ರ ಮಾ. 1ರಿಂದ ಆರಂಭ

l 2022ರ ಜೂ. 22ಕ್ಕೆ ಮುಕ್ತಾಯ

l ಪರೀಕ್ಷೆಗಳ ಆರಂಭ: 2022ರ ಜು. 31

l ಫಲಿತಾಂಶ: 2022ರ ಆ. 14

Advertisement

Udayavani is now on Telegram. Click here to join our channel and stay updated with the latest news.

Next