Advertisement

ಅಭ್ಯರ್ಥಿಗಳ ಅದೃಷ್ಟ ಬರೆದವರು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ !

02:23 AM Apr 26, 2019 | Team Udayavani |

ಉಡುಪಿ: ಈ ಬಾರಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳು ಹೊಸ ಮತದಾರರಾಗಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಮತಗಳನ್ನು ಹಾಕಿ ಅಭ್ಯರ್ಥಿಗಳ ಅದೃಷ್ಟವನ್ನು ಬರೆದರು. ಇದೇ ವಿದ್ಯಾರ್ಥಿಗಳು ಈಗ ತಮ್ಮ ಅದೃಷ್ಟ ಪರೀಕ್ಷೆಯ ಕಾಲಘಟ್ಟದಲ್ಲಿದ್ದಾರೆ.

Advertisement

ಗುರುವಾರ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಪದವಿ ಪರೀಕ್ಷೆಗಳು ಆರಂಭಗೊಂಡಿವೆ. ಮೇ 21ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಮೇ 23ರಂದು ಚುನಾವಣ ಫ‌ಲಿತಾಂಶ ಪ್ರಕಟವಾಗಲಿದೆ.

ಮಂಗಳೂರು ವಿ.ವಿ.ಯ ವಿಶೇಷವೆಂದರೆ ಇದರ ವ್ಯಾಪ್ತಿಯಲ್ಲಿ ಹಲವು ಲೋಕಸಭಾ ಕ್ಷೇತ್ರಗಳ ಸಂಪರ್ಕವಿದೆ. ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರ, ದ.ಕ. ಲೋಕಸಭಾ ಕ್ಷೇತ್ರ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಡುಪಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ಹೀಗೆ ನಾಲ್ಕಾರು ಕ್ಷೇತ್ರ, ಅಷ್ಟೇ ಪ್ರಮಾಣದಲ್ಲಿ ಜಿಲ್ಲೆಗಳಲ್ಲಿ ವಿ.ವಿ. ಪರೀಕ್ಷೆಗಳ ನಂಟು ಇದೆ. ಒಂದು ವಿ.ವಿ.ಯಲ್ಲಿ ಇಷ್ಟೊಂದು ಕ್ಷೇತ್ರ, ಜಿಲ್ಲೆಯ ನಂಟು ಇರುವುದು ಬಲು ಅಪರೂಪ.

Advertisement

Udayavani is now on Telegram. Click here to join our channel and stay updated with the latest news.

Next