Advertisement

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

10:19 PM Jan 18, 2021 | Team Udayavani |

ಕಾರವಾರ : ದೇಶದ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ ಜ.20 ಮತ್ತು 21 ರಂದು ಕಾರವಾರ ಬಳಿಯ ಐಎನ್ ಎಸ್ ಕದಂಬ ನೌಕಾನೆಲೆಗೆ ಭೇಟಿ‌ ನೀಡಲಿದೆ.

Advertisement

ಸಮಿತಿಯ ಅಧ್ಯಕ್ಷ ಜುಅಲ್ ಓರಾಮ್, ಸಮಿತಿಯ  ಸದಸ್ಯರಾದ  ಸಂಸದ ರಾಹುಲ್ ಗಾಂಧಿ,‌ಶರದ್ ಪವಾರ್, ಸಂಜಯ್ ರಾಹುತ್ , ಜುಗಲ್ ಕಿಶೋರ್ ಶರ್ಮ, ಅಶೋಕ್ ‌ಬಾಜಪೇಯಿ, ಪ್ರೇಮಚಂದ ಗುಪ್ತಾ , ಟಿ.ಆರ್.ಪರವಿಂದರ್ ಸೇರಿದಂತೆ ಒಟ್ಟು 31 ಜನ ಸಮಿತಿ ಸದಸ್ಯರು ಕಾರವಾರ ನೇವಿಯ ಪ್ರಗತಿ ಕಾಮಗಾರಿಗಳು ಹಾಗೂ ಈಗ ಲಭ್ಯ ಇರುವ ಸೌಕರ್ಯಗಳನ್ನು ವೀಕ್ಷಿಸಿ ಮಾಹಿತಿ ಪಡಯಲಿದ್ದಾರೆ.

21ಜನ ಲೋಕಸಭಾ ಸದಸ್ಯರು, 11 ಜನ ರಾಜ್ಯ ಸಭಾ ಸದಸ್ಯರು ರಕ್ಷಣಾ ಇಲಾಖೆಯ ಸಂಸದೀಯ  ಸ್ಥಾಯಿ ಸಮಿತಿಯಲ್ಲಿ ಇರಲಿದ್ದಾರೆ. ಸದಸ್ಯರು ಜ.21 ರಂದು ಗೋವಾಕ್ಕೆ ಆಗಮಿಸಿ, ನಂತರ ಕಾರವಾರ ಬಳಿಯ ನೇವಿ ತಲುಪಲಿದ್ದಾರೆ. ಅಜ್ಜಿ  ಇಂದಿರಾ ಗಾಂಧಿ ಕಾಲದ  ಕನಸಿನ ನೌಕಾನೆಲೆ, ರಾಜೀವ್ ಗಾಂಧಿ ಪ್ರಧಾನಿಯಾದಾಗ ಶಂಕುಸ್ಥಾಪನೆಯಾಗಿತ್ತು.‌ಆದರೆ ಅನುಷ್ಠಾನಕ್ಕೆ ಬಂದದ್ದು ಜಾರ್ಜ ಪರ್ನಾಂಡೀಸ್ ರಕ್ಷಣಾ ಸಚಿವರಾಗಿದ್ದಾಗ ,1998 ರಲ್ಲಿ.

ನೌಕಾನೆಲೆ ದೇಶಕ್ಕೆ ಸಮರ್ಪಣೆಯಾದದ್ದು ಪ್ರಣವ್ ಮುಖರ್ಜಿ ರಕ್ಷಣಾ ಸಚಿವರಾದ 2005 ನೇ ಇಸ್ವಿಯಲ್ಲಿ. ಆಗ ಸಂಸದೆ  ಸೋನಿಯಾ ಗಾಂಧಿ ‌ಕಾರವಾರ ನೇವಿಗೆ ಭೇಟಿ‌ ನೀಡಿದ್ದು ಸ್ಮರಣೀಯ

Advertisement

Udayavani is now on Telegram. Click here to join our channel and stay updated with the latest news.

Next