Advertisement

ರಕ್ಷಣ ಖರೀದಿಯೂ “ಆತ್ಮನಿರ್ಭರ”

12:45 AM Dec 18, 2020 | mahesh |

ಹೊಸದಿಲ್ಲಿ: ಸೇನೆಯ ಮೂರೂ ಪಡೆಗಳಿಗೆ 28 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳು ಹಾಗೂ ಸೇನಾ ಸಾಮಗ್ರಿಗಳ ಖರೀದಿಗೆ ರಕ್ಷಣ ಸಚಿವಾಲಯ ಗುರು­ವಾರ ಒಪ್ಪಿಗೆ ನೀಡಿದೆ. ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ನಡೆದ ರಕ್ಷಣ ಸ್ವಾಧೀನ ಮಂಡಳಿ(ಡಿಎಸಿ) ಸಭೆ­ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನ ಸೇನೆ ನಡುವೆ ಬಿಕ್ಕಟ್ಟು ಮುಂದುವರಿದಿ­ರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

ಒಟ್ಟಾರೆ ಖರೀದಿಯ ಸಿಂಹಪಾಲನ್ನು ಸ್ವದೇಶಿ ಕಂಪೆನಿಗಳಿಂದ ಖರೀದಿಸುತ್ತಿರು­ವುದು ವಿಶೇಷ. ಅಂದರೆ, 28 ಸಾವಿರ ಕೋಟಿ ರೂ.ಗಳ ಪೈಕಿ 27 ಸಾವಿರ ಕೋಟಿ ರೂ.ಗಳ ರಕ್ಷಣ ಸಾಮಗ್ರಿಗಳನ್ನು ಭಾರತದ ಕಂಪೆನಿಗಳಿಂದಲೇ ಖರೀದಿಸಲಾಗುವುದು. ಈ ಮೂಲಕ ಆತ್ಮನಿರ್ಭರ ಭಾರತ ಮತ್ತು ಮೇಕ್‌ ಇನ್‌ ಇಂಡಿಯಾ ಯೋಜನೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಖರೀದಿಸಲಿರುವ ಸಾಮಗ್ರಿಗಳ ಪೈಕಿ ಡಿಆರ್‌ಡಿಒ ಅಭಿವೃದ್ಧಿಪ ಡಿಸಿ ರುವ ವೈಮಾ­ನಿಕ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ, ಮುಂದಿನ ತಲೆಮಾರಿನ ಗಸ್ತು ನೌಕೆ, ಮಾಡ್ಯು­ಲರ್‌ ಬ್ರಿಡ್ಜ್ ಗಳೂ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next