Advertisement
2,580 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಿರುವ ಈ ಲಾಂಚರ್‌ಗಳನ್ನು ಚೀನ ಮತ್ತು ಪಾಕಿಸ್ಥಾನದ ಗಡಿಗಳಲ್ಲಿರುವ ಆರು ಸೇನಾ ರೆಜಿಮೆಂಟ್‌ಗಳಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ.
Related Articles
Advertisement
ಶೇ.70ರಷ್ಟು ದೇಶೀಯಆರು ಸೇನಾ ರೆಜಿಮೆಂಟ್‌ಗಳು ಒಟ್ಟಾರೆ 114 ಲಾಂಚರ್‌ಗಳನ್ನು ಪಡೆದುಕೊಳ್ಳಲಿವೆ. ಈ ಶಸ್ತ್ರಾಸ್ತ್ರ ತಯಾರಿಕೆಗೆ ಬಳಕೆಯಾಗುವ ಉಪಕರಣಗಳಲ್ಲಿ ಶೇ. 70ರಷ್ಟು ದೇಶೀಯವಾಗಿರಲಿವೆ. 2024ರ ವೇಳೆಗೆ ಇವುಗಳ ಕಾರ್ಯಾಚರಣೆ ಆರಂಭವಾಗಲಿದೆ.ರಕ್ಷಣ ಸಚಿವಾಲಯವು ಪಿನಾಕಾ ಯೋಜನೆಗೆ ಅಗತ್ಯವಿರುವ 330 ಹೈ-ಮೊಬಿಲಿಟಿ ವೆಹಿಕಲ್‌ಗಳನ್ನು ಪೂರೈಸುವ ಹೊಣೆಯನ್ನು ಬಿಇಎಂಎಲ್‌ಗೆ ವಹಿಸಿದ್ದು, ಸುಮಾರು 842 ಕೋಟಿ ರೂ. ವೆಚ್ಚದಲ್ಲಿ ಇವು ಸಿದ್ಧಗೊಳ್ಳಲಿವೆ. ಬಹು ನಳಿಕೆ ರಾಕೆಟ್ ಲಾಂಚರ್ ‘ಪಿನಾಕಾ’ವನ್ನು ಖಾಸಗಿ ಕೈಗಾರಿಕೆಗಳು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳ ಸಹಯೋಗದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣ ಸಚಿವಾಲಯ ಉದ್ದೇಶಿಸಿದೆ. ಇದು ಬಿಇಎಂಎಲ್ ಚೇತರಿಕೆಗೂ ನೆರವಾಗಲಿದೆ’ ಎಂದು ನಿಗಮದ ಅಧ್ಯಕ್ಷ ಮತ್ತು ಎಂಡಿ ದೀಪಕ್ ಕುಮಾರ್ ಹೊಟಾ ತಿಳಿಸಿದ್ದಾರೆ. ಏನಿದು ಪಿನಾಕಾ?
ರಷ್ಯಾದ ಬಹು ನಳಿಕೆ ರಾಕೆಟ್ ಲಾಂಚರ್ ‘ಗ್ರ್ಯಾಡ್’ಗೆ ಪರ್ಯಾಯವಾಗಿ 1980ರಲ್ಲಿ ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಲು ಆರಂಭಿಸಿತ್ತು. ಮೊದಲ ಬಾರಿಗೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಬಳಸಲಾಯಿತು. ಇದರ ಮುಂದುವರಿದ ಭಾಗವಾಗಿ ಪಿನಾಕಾ ಮಾರ್ಕ್-2 ಪರಿಚಯಿಸಲಾಗುತ್ತಿದೆ. ಮಾರ್ಕ್-2 ಸುಮಾರು 75 ಕಿ.ಮೀ.ವರೆಗೂ ಕ್ಷಿಪಣಿಗಳನ್ನು ಹಾರಿಸಬಲ್ಲದು.