Advertisement

ಮಂಗಳೂರು: ಡಿಫೆನ್ಸ್‌ ಕೌನ್ಸೆಲ್‌ ಕಚೇರಿ ಕಾರ್ಯಾರಂಭ

12:36 AM Jan 16, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನ್ಯಾಯಾಲಯ ಸಂಕೀರ್ಣದಲ್ಲಿ ಕಾನೂನು ನೆರವು ಅಭಿರಕ್ಷಕರ (ಡಿಫೆನ್ಸ್‌ ಕೌನ್ಸೆಲ…) ಕಚೇರಿ ಕಾರ್ಯಾರಂಭ ಮಾಡಿದೆ.

Advertisement

ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜೆ. ವೀರಪ್ಪ ಅವರು ಶುಕ್ರವಾರ ರಾಜ್ಯದ 15 ಜಿÇÉೆಗಳಲ್ಲಿ ಅಭಿರಕ್ಷಕರ ಕಚೇರಿಯನ್ನು ಏಕಕಾಲಕ್ಕೆ ಲೋಕಾರ್ಪಣೆ ಮಾಡಿದರು.

ಮಂಗಳೂರಿನ ನ್ಯಾಯಾಲಯ ಸಂಕೀರ್ಣದಲ್ಲಿ ಜಿÇÉಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಜೋಷಿ ಅವರು ಕಚೇರಿಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಹಿರಿಯ ನ್ಯಾಯವಾದಿ ವಾಸುದೇವ ಗೌಡ ಮುಖ್ಯ ಡಿಫೆನ್ಸ್‌ ಕೌನ್ಸೆಲ್‌ ಆಗಿ ಅಧಿಕಾರ ವಹಿಸಿಕೊಂಡರು. ಉಪ ಡಿಫೆನ್ಸ್‌ ಕೌನ್ಸೆಲ್‌ ಆಗಿ ಶುಕರಾಜ ಕೊಟ್ಟಾರಿ ಹಾಗೂ ಸಹಾಯಕ ಡಿಫೆನ್ಸ್‌ ಕೌನ್ಸೆಲ್‌ ಆಗಿ ಕೃಷ್ಣ ಅಧಿಕಾರ ಸ್ವೀಕರಿಸಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಜಿ. ಶೋಭಾ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ, ಕಾರ್ಯದರ್ಶಿ ಶ್ರೀಧರ ಎಣ್ಮಕಜೆ, ಹಿರಿಯ ವಕೀಲರಾದ ಇಬ್ರಾಹಿಂ ಹಾಗೂ ವಿವಿಧ ನ್ಯಾಯಾಧೀಶರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕ್ರಿಮಿನಲ್‌ ಪ್ರಕರಣದ ಉಚಿತ ಸೇವೆ
ಬಡವರ್ಗ ಮತ್ತು ಅಶಕ್ತರಿಗೆ ಪ್ರಾಧಿಕಾರ ಉಚಿತವಾಗಿ ಕಾನೂನು ಸೇವೆ ಒದಗಿಸುತ್ತಿದೆ. ಅದಕ್ಕಾಗಿ ವಕೀಲರ ಪ್ಯಾನೆಲನ್ನು ನೇಮಿಸಿದೆ. ಇದೀಗ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿ ಪ್ರಾಧಿಕಾರ ಡಿಫೆನ್ಸ್‌ ಕೌನ್ಸೆಲ್‌ನ್ನು ನೇಮಕ ಮಾಡಿ ಅದಕ್ಕೆ ಪ್ರತ್ಯೇಕವಾಗಿ ಪೂರ್ಣಕಾಲಿಕವಾಗಿ ವಕೀಲರನ್ನು ನಿಯೋಜಿಸಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್‌ ರೈ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next