ಡೆಹ್ರಾಡೂನ್: ಹುತಾತ್ಮ ಯೋಧರ ಸ್ಮರಣಾರ್ಥ ನಿರ್ಮಿಸಲಾಗುವ ಸೈನ್ಯ ಧಾಮವು ದೇಶದ ಜನರಿಗೆ ಸೇನೆಗೆ ಸೇರಲು ಪ್ರೇರೇಪಿಸುವುದರೊಂದಿಗೆ ಸೈನ್ಯದ ಬಗ್ಗೆ ಹೆಮ್ಮೆಯ ಭಾವನೆ ಹುಟ್ಟಿಸಲಿದೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬುಧವಾರ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಸೈನ್ಯಧಾಮಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಉತ್ತರಾ ಖಂಡವನ್ನು ಧೈರ್ಯವಂತರ ನಾಡು ಎಂದು ಪ್ರಶಂಶಿಸಿದ್ದಲ್ಲದೇ, ಇತ್ತೀಚೆಗೆ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಾವಿ ಗೀಡಾದ ರಕ್ಷಣ ಪಡೆಯ ಮುಖ್ಯಸ್ಥ ಜ|ಬಿಪಿನ್ ರಾವತ್ ಅವರನ್ನೂ ನೆನಪಿಸಿಕೊಂಡರು.
ಚಾರ್‌ಧಾಮಗಳಂತೆ, ಹುತಾತ್ಮ ಸೈನಿಕರಿಗಾಗಿ ಸೈನ್ಯ ಧಾಮ್ ನಿರ್ಮಿಸುವುದಾಗಿ ಪ್ರಧಾನಿಯವರು ಘೋಷಿಸಿದ್ದರು. ಉತ್ತರಾಖಂಡದಾದ್ಯಂತ ಹುತಾತ್ಮರಾಗಿರುವ 1,734 ಯೋಧರ ಮನೆಯ ಮಣ್ಣನ್ನು ಸಂಗ್ರಹಿಸಲಾಗಿದ್ದು, ಅದನ್ನು ಈ ಧಾಮದ ಅಡಿಪಾಯಕ್ಕೆ ಬಳಸಲಾ ಗುವುದು.
ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರ ಪರಿಹಾರ ಕೊಡಿಸಲಿ: ಬಂಡೆಪ್ಪ ಕಾಶಂಪೂರ್
ಇನ್ನೊಂದೆಡೆ ಪಾಕ್ ಮತ್ತು ಭಾರತ ನಡುವಿನ ಯುದ್ಧಕ್ಕೆ 50 ವರ್ಷಗಳಾದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗುರು ವಾ ರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ವರ್ಷದ ಹಿಂದೆ ಅವರೇ ಆರಂಭಿಸಿದ್ದ “ಸ್ವರ್ಣಿಂ ವಿಜಯ ಜ್ಯೋತಿ’ಯನ್ನೂ ಈ ವೇಳೆ ಸ್ವೀಕರಿಸಲಿದ್ದಾರೆ.