Advertisement

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ

04:32 PM Aug 19, 2017 | |

ಹುಣಸಗಿ: ಕ್ರೀಡೆಯಲ್ಲಿ ಸೋಲು-ಗೆಲವು ಸಾಮಾನ್ಯ. ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಹೇಳಿದರು. ಹುಣಸಗಿ ಸಮೀಪದ ವಜ್ಜಲ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹುಣಸಗಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿ ಆಗುತ್ತದೆ. ಕ್ರೀಡಾಪಟುಗಳು ಕ್ರೀಡಾಮನೋಭಾವದೊಂದಿಗೆ ಆಟವಾಡಬೇಕು ಎಂದರು. ಹಿರಿಯ ಮುಖಂಡ ಸಂಗನಗೌಡ ಪಾಟೀಲ ಮಾತನಾಡಿ, ಕ್ರೀಡೆಯಲ್ಲಿ ಸೋತೆನೆಂಬ ಹತಾಶೆ ಭಾವ ಬೇಡ. ಸೊಲನ್ನು ಗೆಲುವಿನ ಮಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕು. ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಬೇಕು ಎಂದರು. ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಆದ್ದರಿಂದ ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು. ಹಿರಿಯ ಅಧಿಕಾರಿ ರಾಮಾಂಜನೇಯ, ಗ್ರಾಪಂ ಅಧ್ಯಕ್ಷ ಮಲ್ಲಮ್ಮ ಚಂದ್ರಶೇಖರ ಸಗರ, ತಾಪಂ ಸದಸ್ಯ ಭೀಮರಾಯ ದೊಡ್ಡಮನಿ, ಈಶ್ವರಪ್ಪ ಶ್ರೀಗಿರಿ, ಭೂ ನ್ಯಾಯಮಂಡಳಿ ಸದಸ್ಯ ಸಂಗನಗೌಡ ಪೊಲೀಸ್‌ಪಾಟೀಲ, ರಾಮನಗೌಡ ಪೊಲೀಸ್‌ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡೂರ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್‌. ಪೊಲೀಸ್‌ ಪಾಟೀಲ, ಎಸ್‌ ಡಿಎಂಸಿ ಅಧ್ಯಕ್ಷ ಬಸಯ್ಯಸ್ವಾಮಿ, ಮಲ್ಲನಗೌಡ ಅಮಲಿಹಾಳ, ಮಲ್ಲನಗೌಡ ಬಸನಗೌಡ್ರ, ಚಂದ್ರಶೇಖರ ಬೋರಮಗುಂಡ, ಚಂದಪ್ಪ ಗಿಂಡಿ, ತಮ್ಮನಗೌಡ ಪಾಟೀಲ, ಅಭಿವೃದ್ಧಿ ಅಧಿಕಾರಿ ಶರಣಗೌಡ ಉಳ್ಳೇಸುಗೂರು, ಶಿವಲಿಂಗಪ್ಪ ಬಜನಿ, ಬಸನಗೌಡ ಬಾಗೇವಾಡಿ, ಬಸಣ್ಣ ಯಾಳಗಿ ಸೇರಿದಂತೆ ಇತರರು ಇದ್ದರು. ಶಾಂತಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಹಾವರಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next