Advertisement

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

09:58 AM Jan 23, 2019 | |

ರಾಯಚೂರು: ಕ್ರೀಡೆಗಳಲ್ಲಿ ಸೋಲು-ಗೆಲುವು ಸಹಜ. ಅದನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಅಳವಡಿಸಿಕೊಳ್ಳಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಮಹಾದೇವಯ್ಯ ಹೇಳಿದರು.

Advertisement

ನಗರದ ಎಲ್‌ವಿಡಿ ಕಾಲೇಜ್‌ ಆವರಣದಲ್ಲಿ ಗಣರಾಜ್ಯೋತ್ಸವ ನಿಮಿತ್ತ ರವಿವಾರ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ವೃತ್ತಿ ಬದುಕಿನ ಒತ್ತಡದ ಮಧ್ಯೆ ಇಂಥ ಕ್ರೀಡಾಕೂಟಗಳಲ್ಲಿ ಭಾಗಿಯಾಗುವುದು ಉತ್ತಮ. ಇದರಿಂದ ಮಾನಸಿಕ ಒತ್ತಡ ನಿವಾರಣೆ ಆಗಲಿದೆ ಎಂದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್‌.ಭಾನುರಾಜ ಮಾತನಾಡಿ, ಸಂಘದ ಸದಸ್ಯರನ್ನು ಸಕ್ರಿಯವಾಗಿಡಲು ಇಂಥ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಪ್ರತಿ ಗಣರಾಜ್ಯೋತ್ಸವಕ್ಕೂ ನಾವು ಕ್ರೀಡೆಗಳನ್ನು ಆಯೋಜಿಸಿ ವಕೀಲರಲ್ಲಿ ಉತ್ಸಾಹ ತರುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು.

ನ್ಯಾಯಾಂಗ ಇಲಾಖೆ ತಂಡದ ನಾಯಕರಾಗಿ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಾಫ ಹುಸೇನ್‌, ಅದೇ ತಂಡದಲ್ಲಿ ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಈಶ್ವರ ಹಾಗೂ ಕಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರಾದ ರಾಜಶೇಖರ ಹಾಗೂ ನ್ಯಾಯಾಂಗ ಇಲಾಖೆ ನೌಕರರು ಮತ್ತು ಎರಡನೇ ತಂಡದ ನಾಯಕರಾದ ಎಚ್.ಮೇಟಿ ವಕೀಲರು ಹಾಗೂ ಸಂಗಡಿಗರು ಮತ್ತು ಮೂರನೇ ತಂಡದ ನಾಯಕರಾದ ರಾಮಣ್ಣ ನಾಯಕ ವಕೀಲರು ಹಾಗೂ ತಂಡದ ಸದಸ್ಯರು ಭಾಗವಹಿಸಿದ್ದರು.

ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರಯಲಿ, ಜಂಟಿ ಕಾರ್ಯದರ್ಶಿ ನಜೀರ್‌ ಅಹ್ಮದ್‌, ಖಜಾಂಚಿ ರಾಮು ವಕೀಲರು ಹಾಗೂ ಹಿರಿಯ ವಕೀಲ ಕೆ.ಮಲ್ಲಿಕಾರ್ಜುನ, ಅಂಬಾಪತಿ ಪಾಟೀಲ, ಎಸ್‌.ಎಸ್‌.ಹೊಸಗೌಡರು, ಕೆ.ಸಿ.ವೀರೇಶ, ಅಶೋಕ ಗೋನಾಳ, ಮಲ್ಲಪ್ಪ ಚನ್ನಪ್ಪನವರ, ವಿಶ್ವನಾಥ ಇಟಗಿ, ಬಂಡೇಶ ವಲ್ಕಂದಿನ್ನಿ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next