Advertisement

ಯೋಧರ ಜೀವ ಕಸಿದ ಉಗ್ರರಿಗೆ ಧಿಕ್ಕಾರ

07:34 AM Feb 17, 2019 | Team Udayavani |

ಕನಕಪುರ: ನಗರದ ಮುಖ್ಯ ರಸ್ತೆಯಲ್ಲಿ ಪತಂಜಲಿ ಯೋಗ ಶಿಬಿರದಿಂದ ಅಯ್ಯಪ್ಪ ಸ್ವಾಮಿ ದೇಗುಲದವರೆಗೂ ನೂರಾರು ಮಹಿಳೆಯರು ವಿವಿಧ ಸಂಘಟನೆ ಕಾರ್ಯಕರ್ತರು, ಸಾರ್ವಜನಿಕರು ಮೇಣದಬತ್ತಿ ಹಿಡಿದು ಉಗ್ರ ಸಂಘಟನೆ ವಿರುದ್ಧ ಧಿಕ್ಕಾರ ಕೂಗುತ್ತಾ ಚೆನ್ನಬಸಪ್ಪ ವೃತ್ತದಲ್ಲಿ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು.

Advertisement

ಉಗ್ರ ಸಂಘಟನೆಯನ್ನು ಮಟ್ಟ ಹಾಕಲಿ: ಪತಂಜಲಿ ಯೋಗ ಶಿಬಿರದ ಸ್ಪೃತಿ ಮಾತನಾಡಿ, ಇಂದು ಇಡೀ ಭಾರತ ದುಃಖ ಸಾಗರದಲ್ಲಿ ಮುಳುಗಿದೆ. ನಮ್ಮ ಯೋಧರನ್ನು ಕಳೆದುಕೊಂಡು ಪ್ರತೀಕಾರ ಭಾವನೆ ನಮ್ಮೆಲ್ಲರಲ್ಲೂ ಮೂಡಿದೆ. ಕಾಶ್ಮೀರದಲ್ಲಿ ನಡೆದ ದಾಳಿಯಲ್ಲಿ 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಯೋಧರನ್ನು ಬಲಿ ತೆಗೆದುಕೊಂಡ ಜೈಶ್‌-ಎ- ಉಗ್ರ ಸಂಘಟನೆಯನ್ನು ಸರ್ಕಾರ ಮಟ್ಟ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ತಿಂಗಳ ಹಿಂದೆ ಮದುವೆ: ಬಿಜೆಪಿ ಮುಖಂಡ ನಾಗರಾಜು ಮಾತನಾಡಿ, ನಮ್ಮ ದೇಶದಲ್ಲಿ ವೀರ ಯೋಧರಿಗೆ ಕೊರತೆ ಇಲ್ಲ. ಇಂತಹ ದುರ್ಘ‌ಟನೆ ನಡೆದಿದ್ದರೂ ಬುದ್ಧಿಜೀವಿಗಳು, ವಿಚಾರವಾದಿಗಳು, ಪ್ರಗತಿಪರ ಸಂಘಟನೆಗಳು, ರಾಜಕಾರಣಿಗಳು ಖಂಡಿಸುತ್ತಿಲ್ಲ.

ನಮ್ಮ ತಾಲೂಕಿನ ಸಾಸಲಪುರದ ಹೆಣ್ಣು ಮಗಳನ್ನು ದೇಶಕ್ಕಾಗಿ ಪ್ರಾಣ ಕೊಟ್ಟ ಗುಡಿಗೆರೆ ಗ್ರಾಮದ ಗುರುವಿಗೆ ಕೊಟ್ಟು ಮದುವೆ ಮಾಡಿದ್ದೇವೆ. ವಿಧಿಯಾಟ ಮದುವೆಯಾಗಿ ಕೇವಲ 10 ತಿಂಗಳು ಎರಡು ದಿವಸಗಳು ಮಾತ್ರ ಕಳೆದಿವೆ. ಆತ ತನ್ನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಚಿರ ನೆಮ್ಮದಿಯಾಗಿ ಇರಲಿ ಎಂದು ಆಶೀರ್ವಾದ ಮಾಡಿ ಎಂದು ಬರೆದುಕೊಂಡಿದ್ದ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next