Advertisement

ಧಾರ್ಮಿಕ ಧ್ರುವೀಕರಣದಿಂದ ಕಾಂಗ್ರೆಸ್‌ಗೆ ಸೋಲು: ಐವನ್‌

07:18 AM May 26, 2019 | Lakshmi GovindaRaj |

ಮಂಗಳೂರು: ಮತದಾರರನ್ನು ಅಭಿವೃದ್ಧಿಯ ಹೊರತಾಗಿ ಧಾರ್ಮಿಕ ಧ್ರುವೀಕರಣದ ಮೂಲಕ ಸೆಳೆಯುವಲ್ಲಿ ಬಿಜೆಪಿ ಸಫ‌ಲವಾದ ಕಾರಣ ಕಾಂಗ್ರೆಸ್‌ ಸೋಲು ಅನುಭವಿಸಬೇಕಾಗಿ ಬಂತು. ಚುನಾವಣೆ ಫ‌ಲಿತಾಂಶ ತೃಪ್ತಿ ತಂದಿಲ್ಲವಾದರೂ ಜನರ ತೀರ್ಪಿಗೆ ತಲೆಬಾಗುತ್ತೇವೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೇನೆಯ ಸಾಧನೆಯನ್ನು ಪಕ್ಷದ ಸಾಧನೆಯೆಂದು ಬಿಂಬಿಸುವ ಮೂಲಕ, ಸೈನ್ಯದ ಮುಖ್ಯಸ್ಥರು ನೀಡಬೇಕಾಗಿದ್ದ ಹೇಳಿಕೆಗಳನ್ನು ಪ್ರಧಾನಿ, ಸಚಿವರೇ ನೀಡಿ ಭಾವನಾತ್ಮಕವಾಗಿ ಜನರನ್ನು ಸೆಳೆಯಲಾಯಿತು. ಅಭಿವೃದ್ಧಿಯನ್ನು ಕಡೆಗಣಿಸಿ ದೇಶದ ರಕ್ಷಣೆ ಮತ್ತು ಭದ್ರತೆ ವಿಚಾರದಲ್ಲಿ ಹೆಚ್ಚು ಪ್ರಚಾರ ನೀಡುವ ಮೂಲಕ ಬಿಜೆಪಿ ಜಯ ಸಾಧಿಸಿತು ಎಂದು ಟೀಕಿಸಿದರು.

ರಾಜ್ಯಕ್ಕೆ ಲೋಕಸಭೆಯ ಫ‌ಲಿತಾಂಶ ಅನ್ವಯ ಆಗದು. ರಾಜ್ಯದಲ್ಲಿ ಮೈತ್ರಿ ಸರಕಾರ ಸುಭದ್ರವಾಗಿದೆ. ಸರಕಾರ ಆಡಳಿತಕ್ಕೆ ಬಂದಂದಿನಿಂದ ಬಿಜೆಪಿ ಹಲವು ರೀತಿಯ ತಂತ್ರಗಳನ್ನು ನಡೆಸಿ ಸರಕಾರ ಉರುಳಿಸುವ ಕನಸು ಕಾಣುತ್ತಿದೆ. ಆದರೆ, ಶಾಸಕರೆಲ್ಲರೂ ಒಟ್ಟಾಗಿದ್ದಾರೆ. ಐದು ವರ್ಷಗಳ ಕಾಲ ಸರಕಾರ ನಡೆಯಲಿದೆ ಎಂದು ಐವನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next