Advertisement

ಅಮೆರಿಕ ಎಲೆಕ್ಷನ್‌ ಟ್ರಂಪ್‌ಗೆ ಸೋಲು

10:50 AM Nov 08, 2018 | Harsha Rao |

ವಾಷಿಂಗ್ಟನ್‌: ಅಮೆರಿಕದ ಅತ್ಯಂತ ಮಹತ್ವದ ಉಪಚುನಾವಣೆಯ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು, ವಿರೋಧ ಪಕ್ಷ ಡೆಮಾಕ್ರಾಟ್‌ ಈಗ ಕೆಳಮನೆಯನ್ನು 8 ವರ್ಷಗಳ ಅನಂತರ ಮೊದಲ ಬಾರಿಗೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಆದರೆ ಮೇಲ್ಮನೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷ ಗೆಲುವು ಸಾಧಿಸಿದೆ. ಕೆಳಮನೆಯಲ್ಲಿ ಡೆಮಾಕ್ರಾಟ್‌ಗಳು 23ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಟ್ರಂಪ್‌ ರೂಪಿಸಿದ ಕಾನೂನುಗಳಿಗೆ ಪಕ್ಷ ಅಡ್ಡಿಪಡಿಸಲಿವೆ. ಇದರಿಂದಾಗಿ ಮುಂದಿನ ಎರಡು ವರ್ಷಗಳವರೆಗೆ ಟ್ರಂಪ್‌ಗೆ ಸಂಕಷ್ಟ ಎದುರಾಗಲಿದೆ. ಅಲ್ಲದೆ, ಹಲವು ಸಮಿತಿಗಳು ಡೆಮಾಕ್ರಾಟ್‌ಗಳ ಕೈವಶ ವಾಗಿರುವುದರಿಂದ ಟ್ರಂಪ್‌ ವಿರುದ್ಧದ ಆರೋಪಗಳ ತನಿಖೆ ಮರು ಆರಂಭಿಸುವ ಸಾಧ್ಯತೆಯಿದೆ. ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದ ವೆಚ್ಚಗಳ ಬಗ್ಗೆ ತೆರಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಟ್ರಂಪ್‌ ನಿರಾಕರಿಸಿದ್ದು, ಇದರ ತನಿಖೆಗೆ ಡೆಮಾಕ್ರಾಟ್‌ಗಳ ನೇತೃತ್ವದ ಸಮಿತಿ ಆದೇಶಿಸಬಹುದು.

Advertisement

ಮೆಕ್ಸಿಕೋ ಗಡಿಯಲ್ಲಿ ನಿರ್ಮಿಸಲು ಟ್ರಂಪ್‌ ನಿರ್ಧರಿಸಿರುವ ಗೋಡೆ ನಿರ್ಮಾಣಕ್ಕೂ ಡೆಮಾಕ್ರಾಟ್‌ಗಳು ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next