Advertisement

ರಾಹುಲ್‌ ವಿರುದ್ಧ ಮಾನನಷ್ಟ ಕೇಸು

01:34 AM Apr 20, 2019 | mahesh |

ಮೋದಿ ಎಂಬ ಹೆಸರಿನವರೆಲ್ಲ ಕಳ್ಳರು ಎಂಬುದಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಐಪಿಎಲ್‌ ಮಾಜಿ ಮುಖ್ಯಸ್ಥ, ಹಣಕಾಸು ಅವ್ಯವಹಾರ ಪ್ರಕರಣದ ಆರೋಪಿ ಲಲಿತ್‌ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಲಲಿತ್‌, ಮೋದಿ ಎಂಬ ಹೆಸರಿನವರೆಲ್ಲರೂ ಕಳ್ಳರು ಎಂದು ರಾಹುಲ್‌ ಹೇಳಿದ್ದಾರೆ. ಅವರನ್ನು ನಾನು ಇಂಗ್ಲೆಂಡ್‌ನ‌ಲ್ಲಿ ಕೋರ್ಟಿಗೆ ಎಳೆಯುತ್ತೇನೆ. ವಾಸ್ತವವೆಂದರೆ, 5 ದಶಕಗಳವರೆಗೆ ಭಾರತದಲ್ಲಿ ಹಗಲು ದರೋಡೆ ಮಾಡಿದವರು ಗಾಂಧಿ ಕುಟುಂಬದವರು ಎಂದಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯನ್ನೂ ಲಲಿತ್‌ ಟ್ಯಾಗ್‌ ಮಾಡಿದ್ದಾರೆ.

Advertisement

1 ಲಕ್ಷ ರೂ. ಬಹುಮಾನ ಘೋಷಣೆ
ನೋಟು ಅಮಾನ್ಯದ ಬಳಿಕ 5 ಕೋಟಿ ರೂ. ಮೌಲ್ಯದ ಹಳೇ ನೋಟುಗಳನ್ನು ಬದಲಾಯಿ ಸುತ್ತಿರುವ ವಿಡಿಯೋವೊಂದರಲ್ಲಿ ಕಂಡುಬಂದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚುವವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಶುಕ್ರವಾರ ಅಹಮದಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌, “ಇದು ಅಹಮದಾಬಾದ್‌ನಲ್ಲೇ ಸೆರೆಹಿಡಿಯಲಾದ ವಿಡಿಯೋ. ಇದರಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಪಾತ್ರವೂ ಇದೆ. 5 ಕೋಟಿ ರೂ.ಗಳ ಹಳೇ ನೋಟುಗಳ ಬದಲಿಗೆ ವ್ಯಕ್ತಿ ಯೊಬ್ಬ 3 ಕೋಟಿ ರೂ. ಮೊತ್ತದ ಹೊಸ ನೋಟುಗಳನ್ನು ಬದಲಿಸಿಕೊಡುವ ದೃಶ್ಯ ಇದರಲ್ಲಿದೆ. ಈತ ಬಿಜೆಪಿಯ ಸದಸ್ಯನಾಗಿರಬಹುದು ಎಂಬ ಶಂಕೆಯೂ ಇದೆ. ಹಾಗಾಗಿ, ಯಾರು ಈತನ ಗುರುತು ಹೇಳುತ್ತಾರೋ ಅವರಿಗೆ 1 ಲಕ್ಷ ರೂ. ಬಹುಮಾನ ನೀಡುತ್ತೇವೆ’ ಎಂದು ಘೋಷಿಸಿದ್ದಾರೆ.

ಸ್ಪರ್ಧಿಸಲು ಸಿದ್ಧ: ರಜನಿಕಾಂತ್‌
ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲು ಸಿದ್ಧವಿದೆ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಘೋಷಿಸಿದ್ದಾರೆ. ಮುಂದಿನ ಚುನಾವಣೆ ಯಾವಾಗ ಘೋಷಣೆ ಯಾದರೂ ಸ್ಪರ್ಧಿಸಲು ನಾವು ರೆಡಿಯಾಗಿದ್ದೇವೆ ಎಂದಿದ್ದಾರೆ.

ಹಾರ್ದಿಕ್‌ಗೆ ಕಪಾಳಮೋಕ್ಷ
ಗುಜರಾತ್‌ನ ಸುರೇಂದ್ರನಗರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ಗೆ ದುಷ್ಕರ್ಮಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಕೂಡಲೇ ಅಲ್ಲಿದ್ದ ಕಾರ್ಯಕರ್ತರು ಆ ವ್ಯಕ್ತಿಯನ್ನು ಥಳಿಸಿ, ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹಾರ್ದಿಕ್‌, ಬಿಜೆಪಿ ನನ್ನನ್ನು ಕೊಲೆ ಮಾಡಲು ನಡೆಸಿರುವ ಯತ್ನವಿದು ಎಂದು ಆರೋಪಿಸಿದ್ದಾರೆ. ಆರೋಪ ತಳ್ಳಿಹಾಕಿರುವ ಬಿಜೆಪಿ, ಇದು ಜನರ ಸಹಾನುಭೂತಿ ಗಿಟ್ಟಿಸಿಕೊಳ್ಳಲು ಹಾರ್ದಿಕ್‌ ಮಾಡಿದ ನಾಟಕ ಎಂದಿದೆ.

ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ಆಪತ್ತು ಇದೆ ಎಂಬುದು ಕಾಂಗ್ರೆಸ್‌ ಹತಾಶೆಯಿಂದ ಮಾಡುತ್ತಿರುವ ಆರೋಪ. ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್‌ ಈಗ ತನ್ನ ನೆಲೆ ಕಳೆದುಕೊಂಡು ಹತಾಶ ಸ್ಥಿತಿಗೆ ತಲುಪಿದೆ.
ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

ರಾಹುಲ್‌ಬಾಬಾ ಬಡತನ ನಿರ್ಮೂ ಲನೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ವಡೋದರಾಗೆ ಬಂದು ಇಷ್ಟು ವರ್ಷಗಳಲ್ಲಿ ಬಡವರಿಗಾಗಿ ಏನು ಮಾಡಿದ್ದಾರೆ ಎಂಬು ದನ್ನು ಹೇಳಲಿ. ನಮ್ಮ ಯುವ ಮೋರ್ಚಾದ ಅಧ್ಯಕ್ಷರು ಪ್ರತಿಕ್ರಿಯೆ ಕೊಡುತ್ತಾರೆ.
ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ನಾನು ಇಸ್ಲಾಂಗೆ ವಿರುದ್ಧವಾದ ಯಾವ ಹೇಳಿಕೆಯನ್ನೂ ನೀಡಿಲ್ಲ. ಒಂದು ವೇಳೆ ನನ್ನ ಮೇಲಿನ ಆರೋಪ ಸಾಬೀತಾದರೆ, ನನ್ನ ಸಾರ್ವಜನಿಕ ಜೀವನವನ್ನೇ ಕೊನೆಗಾಣಿಸಲು ಸಿದ್ಧನಿದ್ದೇನೆ.
ಶ್ರೀಧರನ್‌ ಪಿಳ್ಳೆ, ಕೇರಳ ಬಿಜೆಪಿ ಅಧ್ಯಕ್ಷ

ನೋಟು ಅಮಾನ್ಯ, ಜಿಎಸ್‌ಟಿಯಿಂದಾಗಿ ದೇಶದ ಆರ್ಥಿಕತೆ ಹಳಿ ತಪ್ಪಿದೆ. ನಮ್ಮ ನ್ಯಾಯ್‌ ಯೋಜನೆಯು ಆರ್ಥಿಕತೆಯನ್ನು ಹಳಿಗೆ ತರುವುದಲ್ಲದೆ, ಸಾಕಷ್ಟು ಉದ್ಯೋಗಾವಕಾಶವನ್ನೂ ಸೃಷ್ಟಿಸಲಿದೆ.
ರಾಹುಲ್‌ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಕಳೆದ 5 ವರ್ಷಗಳಲ್ಲಿ ದೇಶದಲ್ಲಿ ಭಯೋತ್ಪಾದಕ ದಾಳಿ ಶೇ.177ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯಸಭೆಗೆ ನೀಡಿದ ಮಾಹಿತಿಯೇ ಹೇಳುತ್ತದೆ. ಆದರೆ ಮೋದಿಯವರಿಗೆ ಚುನಾವಣೆ ಹತ್ತಿರ ಬಂದಾಗ ಮಾತ್ರ ದೇಶದ ಭದ್ರತೆ ಬಗ್ಗೆ ನೆನಪಾಗುತ್ತದೆ
ಮುಕುಲ್‌ ಸಂಗ್ಮಾ, ಕಾಂಗ್ರೆಸ್‌ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next