Advertisement

ನ್ಯಾ| ರಂಜನ್‌ ವಿರುದ್ಧ ಮಾನನಷ್ಟ ಮೊಕದ್ದಮೆ

12:31 AM May 12, 2023 | Team Udayavani |

ಹೊಸದಿಲ್ಲಿ: ರಾಜ್ಯಸಭಾ ಸಂಸದ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ಅವರ ವಿರುದ್ಧ ಅಸ್ಸಾಂ ಲೋಕೋಪಯೋಗಿ (ಎಪಿಡಬ್ಲ್ಯು) ಅಧ್ಯಕ್ಷ ಅಭಿಜಿತ್‌ ಶರ್ಮಾ 1 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆಂದು ವರದಿಯಾಗಿದೆ.

Advertisement

ಗೊಗೋಯ್‌ ಅವರ ಆತ್ಮಕಥೆ “ಜಸ್ಟೀಸ್‌ ಫಾರ್‌ಎ ಜಡ್ಜ್’ ಪುಸ್ತಕ ಇನ್ನೇನು ಬಿಡು ಗಡೆಯಾಗಬೇಕಿತ್ತು. ಆದರೆ ಪುಸ್ತಕದಲ್ಲಿ ತಮ್ಮ ವಿರುದ್ಧ ಗೊಗೋಯ್‌ ಅವಮಾನಕರ ಉಲ್ಲೇಖಗಳನ್ನು ಮಾ ಡಿದ್ದಾರೆ ಎಂದು ಅಭಿಜಿತ್‌ ಆರೋಪಿ ಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆಗೂ ತಡೆ ಕೋರಿ ಅರ್ಜಿ ಸಲ್ಲಿಸಿದ್ದಾರಲ್ಲದೇ ಗೊಗೋಯ್‌ ಹಾಗೂ ಪುಸ್ತಕದ ಪ್ರಕಾಶಕರಾದ ರೂಪಾ ಪಬ್ಲಿಕೇಶನ್ಸ್‌ ಅವರ ವಿರುದ್ಧವೂ ಮೊಕ ದ್ದಮೆ ದಾಖಲಿಸಿದ್ದಾರೆ. ಅರ್ಜಿದಾರರು ಹಾಗೂ ಪ್ರತಿವಾದಿಗಳಿಬ್ಬರಿಗೂ ಸಮನ್ಸ್‌ ಜಾರಿಗೊಳಿಸಲಾಗಿದೆ. ಮುಂದಿನ ವಿಚಾ ರಣೆಯನ್ನು ಜೂನ್‌ 3ಕ್ಕೆ ನಿಗದಿಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next