Advertisement
“ನಾನು ಯಾವುದೇ ಮಾನಹಾನಿಕರ ಹೇಳಿಕೆ ನೀಡಿಲ್ಲ. ಕೀಳುಮಟ್ಟದ ಪ್ರಚಾರ ಪಡೆಯುವ ಸಲುವಾಗಿ ನನ್ನ ವಿರುದ್ಧ ಕೇಸು ದಾಖಲಿಸಲಾಗಿದೆ’ ಎಂದು ಅವರು ಕೋರ್ಟ್ ಮುಂದೆ ಹೇಳಿದರು. ವಿಚಾರಣೆಯನ್ನು ಆ.12ಕ್ಕೆ ಮುಂದೂಡಿದ ನ್ಯಾಯಾಲಯ, ಅಂದು ಖುದ್ದು ಹಾಜರಾತಿಯಿಂದ ರಾಹುಲ್‌ಗೆ ವಿನಾಯಿತಿ ನೀಡಿದರು. ಮಧ್ಯಪ್ರದೇಶ ಬಿಜೆಪಿಯ ಸ್ಥಳೀಯ ನಾಯಕ ವಿಜಯ್ ಮಿಶ್ರಾ ಅವರು 2018ರ ಆ.04ರಂದು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಹೊಸದಿಲ್ಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸದನ ಸಮಿತಿಯು ದಿಲ್ಲಿಯ ಸುನೇರಿ ಬಾಘ… ರಸ್ತೆಯಲ್ಲಿನ ಬಂಗಲೆ ಸಂಖ್ಯೆ 05 ಅನ್ನು ನೀಡಲಿದೆ ಎನ್ನಲಾಗಿದೆ. ಸೋದರಿ ಪ್ರಿಯಾಂಕಾ ವಾದ್ರಾ ಬಂಗಲೆಗೆ ಭೇಟಿ ನೀಡಿದ ಬಳಿಕ ಈ ವದಂತಿ ಇನ್ನಷ್ಟು ಹೆಚ್ಚಿವೆ. ಈ ಬಗ್ಗೆ ಸಮಿತಿಯು ಈಗಾಗಲೇ ರಾಹುಲ್‌ಗೆ ಮಾಹಿತಿ ನೀಡಿದ್ದು, ಅವರ ಒಪ್ಪಿಗೆಯಷ್ಟೇ ಬಾಕಿಯಿದೆ ಎಂದು ಸಂಸತ್ ಮೂಲಗಳು ಹೇಳಿವೆ. ಸಂಸದರಾದಾಗಿನಿಂದಲೂ ರಾಹುಲ್ ನಂ.12, ತುಘ ಲಕ್ ಲೇನ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ವರ್ಷ ಪ್ರಕರಣವೊಂದರಲ್ಲಿ ಅನರ್ಹಗೊಂಡಾಗ ಈ ಬಂಗಲೆ ತೆರವುಗೊಳಿಸಿ, ತಾಯಿ ಸೋನಿಯಾ ಗಾಂಧಿ ಜತೆಗೆ 10 ಜನಪಥ ನಿವಾಸದಲ್ಲಿ ಇದ್ದರು. ಈಗ ವಿಪಕ್ಷ ನಾಯಕ ರಾದ ಕಾರಣ ಟೈಪ್ 8 ಬಂಗಲೆ ನೀಡಲಾಗುತ್ತಿದೆ.