ಕಾರ್ಕಳ (ಉಡುಪಿ): ತನ್ನ ಮೇಲೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸು ದಾಖಲಾಗದಿದ್ದರೂ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್, ಬಿಜೆಪಿ ಪದಾಧಿಕಾರಿಗಳು ದೇಶದ್ರೋಹದ ಹೇಳಿಕೆ ನೀಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೆನೆ ಎಂದು ರಾಧಾಕೃಷ್ಣ ಹಿರ್ಗಾನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನಾದರು ದೇಶದ್ರೋಹ ಪೋಸ್ಟ್ ಹಾಕಿದ ಕೆಲಸ ಮಾಡಿದ್ದರೆ, ಸೈನಿಕರಿಗೆ ಅವಹೇಳನ ಮಾಡಿದ್ದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ. ಗಲ್ಲಿಗೇರಲು ಸಿದ್ದನಿದ್ದೇನೆ. ಆದರೆ ಶಾಸಕರು ಅಥವಾ ಅವರ ಯಾರೇ ಪದಾಧಿಕಾರಿಗಳು ಯಾವುದೇ ಪವಿತ್ರ ಸ್ಥಳದಲ್ಲಿ ಪ್ರಮಾಣಿಕರು ಸಿದ್ದರಿದ್ದಾರೆಯೇ ಎಂದು ಸವಾಲೆಸೆದರು.
ಇದನ್ನೂ ಓದಿ:ಉಡುಪಿ: ಮಗು ಅಪಹರಿಸಿದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು
ಈ ಹಿಂದೆ ನಾನು ಮೂರ್ನಾಲ್ಕು ಬಾರಿ ಠಾಣೆಗೆ ಹಾಜರಾದ ಸಂದರ್ಭ ಒಂದು ಬಾರಿ ನನ್ನ ಹೇಳಿಕೆಯನ್ನು ಪಡೆದಿದ್ದು, ಪ್ರತಿ ಬಾರಿಯೂ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದ್ದೆ. ಅದಾಗ್ಯೂ ತಾನು ತಲೆ ಮರೆಸಿಕೊಂಡಿದ್ದೆ ಎಂದು ಶಾಸಕರು ಸುಳ್ಳು ಹೇಳಿದ್ದಾರೆ ಎಂದು ರಾಧಾಕೃಷ್ಣ ನಾಯಕ್ ಆರೋಪಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಯೋಧರ ವಿರುದ್ಧ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ರಾಧಾಕೃಷ್ಣ ನಾಯಕ್ ಅವರಿಗೆ ಕಾರ್ಕಳ ಟೌನ್ ಎಸ್ ಐ ಮಧು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.