Advertisement

ಜಿಂಕೆ ಬೇಟೆಯಾಡಿದ್ದ ಇಬ್ಬರ ಬಂಧನ, ನಾಲ್ವರು ಪರಾರಿ

09:35 PM May 19, 2021 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನದೊಳಗೆ ಜಿಂಕೆ ಬೇಟೆಯಾಡಿ ಹೊತ್ತೊಯ್ಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ನಾಲ್ವರು ಪರಾರಿಯಾಗಿರುವ ಘಟನೆ ನಡೆದಿದೆ.

Advertisement

ಕೊಡಗು ಜಿಲ್ಲೆಯ ಸಿದ್ದಾಪುರ ಬಳಿಯ ಬಾಡಗರಕೇರಿಯ ದೇವಯ್ಯರ ಪುತ್ರ ಕೆ.ಡಿ.ಪ್ರೀತಮ್, ಬೀರುನಾಣಿ ಗ್ರಾಮದ ಭೀಮಯ್ಯರ ಪುತ್ರ ತಿಮ್ಮಯ್ಯ ಅಲಿಯಾಸ್ ರಾಬಿನ್ ಬಂಧಿತರು. ಬಲ್ಯ ಮೀದರೀರ ಅಪ್ಪಣ್ಣ(ಪೆಮ್ಮಯ್ಯ), ಅಮ್ಮಾನ್, ರಾಜ, ರತನ್ ಚೆಂಗಪ್ಪ ಪರಾರಿಯಾಗಿರುವ ಆರೋಪಿಗಳು.

ಅರಣ್ಯ ಸಿಬ್ಬಂದಿಗಳು ನಾಗರಹೊಳೆ-ಕಾನೂರು ರಸ್ತೆಯಲ್ಲಿ ಗಸ್ತಿನಲ್ಲಿದ್ದ ವೇಳೆ ವೇಗವಾಗಿ ಹೋಗುತ್ತಿದ್ದ ಮಾರುತಿ ವ್ಯಾನ್‌ಗಳನ್ನು ಬೆಳ್ಳಾರ ಗೇಟ್‌ನಲ್ಲಿ ತಡೆದು ತಪಾಸಣೆ ನಡೆಸಿದಾಗ ಜಿಂಕೆ ಮರಿಯ ಶವ ಪತ್ತೆಯಾಗಿದೆ.

ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಉದ್ಯಾನದೊಳಗೆ ಬೇಟೆಯಾಡಿರುವುದನ್ನು ಒಪ್ಪಿಕೊಂಡಿದ್ದಾರೆ.  ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು. ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಡಿ.ಮಹೇಶ್ ಕುಮಾರ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಓ.ಅಮಿತ್ ಗೌಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next