Advertisement

ನಾಯಿ ದಾಳಿಗೆ ಜಿಂಕೆ ಸಾವು

06:01 PM Feb 23, 2021 | Team Udayavani |

ಕೊಟ್ಟಿಗೆಹಾರ: ನಾಯಿಗಳ ದಾಳಿಯಿಂದ ಜಿಂಕೆಯೊಂದು ಮೃತಪಟ್ಟ ಘಟನೆ ಉಗ್ಗೆಹಳ್ಳಿಯಲ್ಲಿ ಸೋಮವಾರ ನಡೆದಿದೆ. ಸೋಮವಾರ ನಾಯಿಗಳ ಹಿಂಡು ಜಿಂಕೆಯನ್ನು ಅಟ್ಟಿಸಿಕೊಂಡು ಬಂದಿದ್ದು ಉಗ್ಗೆಹಳ್ಳಿಯ ಗ್ರಾಮಕ್ಕೆ ಬಂದ ಜಿಂಕೆ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದಿದೆ.

Advertisement

ಉಗ್ಗೆಹಳ್ಳಿ ಗ್ರಾಮದ ಶಿವಕುಮಾರ್‌ ಎಂಬುವವರು ಕೂಡಲೇ ಅರಣ್ಯ ಅ ಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಅರಣ್ಯ ಇಲಾಖೆ ಅ ಧಿಕಾರಿಗಳು ಆಗಮಿಸಿದ್ದರೂ ಕೂಡ ಜಿಂಕೆಯನ್ನು ಉಳಿಸಲು  ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಎಸಿಎಫ್‌ ನಿರ್ಮಲಾ, ಆರ್‌ಎಫ್‌ಒ ಮೋಹನ್‌, ಫಾರೆಸ್ಟರ್‌ ಶಿವಕುಮಾರ್‌, ಗಾರ್ಡ್‌ ನಂದನ್‌ ಕುಮಾರ್‌ ಸುರೇಶ್‌, ಅರಣ್ಯ ವೀಕ್ಷಕ ಮುಳ್ಳಯ್ಯ, ಗ್ರಾಮಸ್ಥರಾದ ಮಂಜುನಾಥ್‌, ರೇವತಿ, ಶೋಭಾ, ಉಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next