Advertisement
ಹ್ಯಾಲೋವೀನ್ ಹಬ್ಬದ ಆಚರಣೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಈಗಿನ ಅಯರ್ಲೆಂಡ್, ಬ್ರಿಟನ್, ಉತ್ತರ ಫ್ರಾನ್ಸ್ ಭಾಗದಲ್ಲಿ ಆರಂಭ ಆಯಿತೆನ್ನುತ್ತಾರೆ. ಆ ಕಾಲದಲ್ಲಿ ನವೆಂಬರ 1ನೆಯ ತಾರೀಕು ಅಧಿಕೃತ ಚಳಿಗಾಲದ ಆರಂಭ ಮತ್ತು ಬೇಸಾಯಗಾರರ ಕೊಯ್ಲಿನ ಮಾಸ ಮುಗಿದು ಹೊಸ ವರ್ಷದ ಆರಂಭವಾಗಿಯೂ ಗುರುತಿಸಲ್ಪಟ್ಟಿತ್ತು. ಬೇಸಿಗೆ ಮುಗಿದು ಕತ್ತಲೆ, ಚಳಿ ಎರಡೂ ಹೆಚ್ಚಾಗಿ, ಭೂತಗಳೂ ಆತ್ಮಗಳೂ ನಮ್ಮನ್ನು ಕಾಡುವುದರ ದ್ಯೋತಕವಾಗಿ ಹ್ಯಾಲೋವೀನ್ ಆಚರಿಸಲ್ಪಡುತ್ತಿತ್ತು. ನಮ್ಮ ಮತ್ತು ಪ್ರೇತಾತ್ಮಗಳನ್ನು ನಡುವಿನ ಅಂತರ ಇನ್ನೂ ಕಡಿಮೆ ಆದ ದಿನ ಎಂದು ಅಕ್ಟೋಬರ್ ತಿಂಗಳ ಕೊನೆಯ ದಿನವನ್ನು ಪರಿಗಣಿಸಲಾಗುತ್ತಿತ್ತು. ಈಗ ಹ್ಯಾಲೋವೀನ್ ಹಬ್ಬದ ಸಂಜೆ ಬ್ರಿಟನ್ನಿನ ಜನವಸತಿಯ ಬೀದಿ ಬೀದಿಗಳಲ್ಲಿ ಮಕ್ಕಳು, ಯುವಕ-ಯುವತಿಯರು ಭೂತ-ಪ್ರೇತ ಮಾಟಗಾತಿಯರ ಮುಖವಾಡ, ವೇಷ ಧರಿಸಿ ಮನೆ ಮನೆಯ ಬಾಗಿಲು ತಟ್ಟುತ್ತಾರೆ. ಮತ್ತೆ ಮನೆಯವರು ಮಕ್ಕಳಿಗೆ ಚಾಕಲೇಟ್ ಅಥವಾ ಸಿಹಿತಿನಿಸುಗಳನ್ನು ಕೊಟ್ಟು ಕಳಿಸುತ್ತಾರೆ. ದೊಡ್ಡ ಚೀನಿಗುಂಬಳ ಕಾಯಿಗೆ ಕಣ್ಣು ಮೂಗು ಬಾಯಿಯಂತೆ ಕಾಣುವ ತೂತು ಕೊರೆದು, ಒಳಗೆ ದೀಪ ಇಟ್ಟು ಮನೆಯ ಹೊರಗಿಡುತ್ತಾರೆ. ಗಳಿಗೆ-ಗಳಿಗೆಗೆ ಯಾರೋ ಬಂದು ಬಾಗಿಲು ತಟ್ಟುವ ಮತ್ತೆ ತಟ್ಟಿದ್ದಕ್ಕೆ ತೆರೆಯುವ, ಆಮೇಲೆ ತೆರೆದದ್ದಕ್ಕೆ ಏನೋ ನೀಡುವ ಉಸಾಬರಿ ಬೇಡ ಎಂದು ಕೆಲವರು ಸಂಜೆಯಿಂದಲೇ ಮನೆಯ ದೀಪಗಳನ್ನು ಆರಿಸಿ ಕತ್ತಲೆಯಲ್ಲಿ ಕೂಡುವವರು ಅಥವಾ ಮನೆಯಲ್ಲಿರದೆ ಎÇÉೋ ಹೋಗುವವರೂ ಇ¨ªಾರೆ. ಇನ್ನು ಹ್ಯಾಲೋವೀನ್ ಬರುವ ಮೊದಲೇ ಮನೆಯನ್ನು ದೆವ್ವ, ಭೂತ, ಅಸ್ಥಿಪಂಜರ, ಭಯಾನಕ ಆಕೃತಿಗಳಿಂದ ಸಿಂಗರಿಸಿಕೊಳ್ಳುವವರೂ ಇ¨ªಾರೆ. ಕೆಲವರ ಮನೆಯಲ್ಲಿ ವಾರಗಳ ಮೊದಲೇ ಸ್ನೇಹಿತರೋ ಕುಟುಬದವರೋ ಸೇರಿಕೊಂಡು ಪಾರ್ಟಿ ಮಾಡುತ್ತಾರೆ. ಹ್ಯಾಲೋವೀನ್‌ನ ಆಚರಣೆ ಬ್ರಿಟನ್ನಿನ ಯುವ ಜನತೆಯಲ್ಲಿ ಹೆಚ್ಚು ಹೆಚ್ಚು ಜನಪ್ರಿಯವೂ ಆತ್ಮೀಯವೂ ಆಗುತ್ತಿದೆ ಹಾಗೂ ಚಿಣ್ಣರೂ ಯುವಕರೂ ಹುಡುಗರೂ ಹುಡುಗಿಯರೂ ಒಬ್ಬಂಟಿಗರೂ ಸಂಸಾರಸ್ಥರೂ ಸೇರಿ ಆಚರಿಸುವ ಹಬ್ಬ ಎನ್ನುವ ಹೆಸರೂ ಪಡೆಯುತ್ತಿದೆ.
Related Articles
Advertisement
ಹದಿನೇಳನೆಯ ಶತಮಾನದಲ್ಲಿ ಇಂಗ್ಲೆಂಡ್‌ನ ಅರಸೊತ್ತಿಗೆ ಪೊಟೆಸ್ಟಂಟ್ ಕ್ರೈಸ್ತರ ಕೈಯಲ್ಲಿತ್ತು. ಅಂದಿನ ಅಧಿಕಾರಶಾಹಿ ಪ್ರೊಟೆಸ್ಟೆಂಟ್‌ರು ಕ್ಯಾಥೊಲಿಕ್ ಕ್ರೈಸ್ತರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ತಮಗಾಗುತ್ತಿರುವ ಅನ್ಯಾಯ-ಅಕ್ರಮಗಳನ್ನು ವಿರೋಧಿಸುವ ಬಗ್ಗೆ ಕೆಲವು ಕ್ರಾಂತಿಕಾರಿ ಕ್ಯಾಥೋಲಿಕರು ಸೇರಿ ಲಂಡನ್‌ಲ್ಲಿರುವ ಸಂಸತ್ ಭವನವನ್ನು ಸುಡುಮದ್ದಿನ ಪುಡಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ಸಂಚಿನಲ್ಲಿದ್ದರು. ಸಂಸತ್ತು ಕಟ್ಟಡದ ನೆಲಮಾಳಿಗೆಯಲ್ಲಿ 36 ಭರಣಿಗಳ ತುಂಬಾ ಸುಡುಮದ್ದುಗಳನ್ನು ಶೇಖರಿಸಿಟ್ಟರು. ಬೆಂಕಿ ತಾಗಿಸಿದರೆ ತಮ್ಮ ಸುತ್ತಮುತ್ತಲಿನ ಒಂದು ಕಿ.ಮೀ. ಪ್ರದೇಶವನ್ನು ನಾಶಮಾಡಬಲ್ಲ ಶಕ್ತಿ ಆ ಸುಡುಮದ್ದಿನ ಸಂಗ್ರಹಕ್ಕೆ ಇತ್ತಂತೆ. ಸಂಚಿನ ರೂವಾರಿ ಅಲ್ಲದಿದ್ದರೂ ಸಂಚಿನಭಾಗವಾಗಿದ್ದ ಗೆಫಾಕ್ಸ್ ಎಂಬಾತ 1605ರ ನವೆಂಬರ್ 5ರಂದು ಸಿಕ್ಕಿಬಿದ್ದ ಮತ್ತು ಆಗ ಸಂಚು ಬಯಲಾಯಿತು.
ಗೈಫಾಕ್ಸ್ ಸಂಗಡಿಗರ ಯೋಜನೆ ಯಶಸ್ವಿ ಆಗಲಿಲ್ಲ ಮತ್ತು ಬಂಧಿಸಲ್ಪಟ್ಟ ಗೈಫಾಕ್ಸ್‌ನ ವಿಚಾರಣೆ ನಡೆಸಿ ಆತನಿಗೆ ಮರಣದಂಡನೆ ವಿಧಿಸಲಾಯಿತು. ಅಂದಿನಿಂದ ಸಂಚು ಬಯಲಾದ ನ. 5ರ ಸ್ಮರಣೆಯಲ್ಲಿ ಬೊನ್‌ಫೈರ್ ದಿನವನ್ನು ಆಚರಿಸುತ್ತಾರೆ. ಕೆಲವು ಕಡೆ ಗೈಫಾಕ್ಸ್‌ನ ಪ್ರತಿಕೃತಿ ದಹನವೂ ನಡೆದು ಸುಡುಮದ್ದುಗಳು ಗುಡುಗಿ ಮಿಂಚುತ್ತವೆ.
ಹಳೆಯ ಆಂಗ್ಲರಿಗೆ ಬೊನ್‌ಫೈರ್ ದಿನ ಪ್ರಿಯವಾದದ್ದು ಮತ್ತೆ ಅವರ ಮನಸ್ಸಿನಲ್ಲಿ ಅದೊಂದು ಅಪ್ಪಟ ಇಂಗ್ಲಿಷ್ ಇತಿಹಾಸದ ಸಂಸ್ಮರಣೀಯ ದಿನ. 17ನೆಯ ಶತಮಾನದಲ್ಲಿ ತಮ್ಮ ದೇಶದಲ್ಲಿ ನಡೆಯಬಹುದಾಗಿದ್ದ ಬಹುದೊಡ್ಡ ಭಯೋತ್ಪಾದಕ ಕೃತ್ಯ ಅಥವಾ ಜಗತ್ತಿನ ಆತಂಕವಾದದ ಮೊದಮೊದಲ ಘಟನೆ ಎಂದೆಲ್ಲ ಆಂಗ್ಲ ಇತಿಹಾಸಕಾರರು ಗೈಫಾಕ್ಸ್‌ನ ವಿಫಲ ಸಂಚಿನ ದಿನದ ಬಗ್ಗೆ ಹೆಮ್ಮೆಯಿಂದ ಬರೆದಿಟ್ಟಿ¨ªಾರೆ. ಇತಿಹಾಸದ ದಾಖಲೆಗಳ ಪುಟವಾಗಿ ಉಳಿದಿರುವ ಹಾಗೂ ವರುಷಗಟ್ಟಲೆಯಿಂದ ಪಾಲಿಸಿಕೊಂಡು ಬಂದಿರುವ ಒಂದೇ ತರಹದ ಆಚರಣಾ ಪದ್ಧತಿಯಿಂದ ಬ್ರಿಟನ್ನಿನ ಎಳೆಯರನ್ನು ಸೆಳೆಯಲು ವಿಫಲವಾಗಿರುವ ನ. 5ನೆಯ ತಾರೀಕು ನಿಧಾನವಾಗಿ ಆಕರ್ಷಣೆಯನ್ನು ಕಳೆದುಕೊಳ್ಳುತ್ತಿದೆ. ಇವತ್ತು ರಾತ್ರಿ ಲಂಡನ್ ಅಲ್ಲಿ ದೊಡ್ಡ ಪ್ರಮಾಣದ ಸುಡುಮದ್ದುಗಳ ಪ್ರದರ್ಶನ ಹಿಂದಿನ ವರ್ಷಗಳಂತೆ ಮುಂದುವರಿದಿದ್ದರೂ ಹೊಸ ಜನಾಂಗದ ಮನಸ್ಸಲ್ಲಿ ಈ ಬೊನ್‌ಫೈರ್ ಡೇ ಸಂಚಲನ ಮೂಡಿಸಲು ಹೆಣಗಾಡುತ್ತಿದೆ; ಹ್ಯಾಲೋವೀನ್ ತೋರಣಗಳು ಎÇÉೆಲ್ಲೂ ಕಂಡು, ಹ್ಯಾಪಿ ಹ್ಯಾಲೋವೀನ್ ಶುಭಾಶಯಗಳು ಎÇÉೆಲ್ಲೂ ಕೇಳಿ ಹ್ಯಾಪಿ ಬೊನ್‌ಫೈರ್ ಡೇ ಒಂದೋ, ಎರಡು ರಾತ್ರಿಗಳ ಪಟಾಕಿ ಹೊಡೆಯುವುದಕ್ಕೆ ಸೀಮಿತವಾಗಿದೆ. ಐದು ದಿನಗಳ ಅಂತರದಲ್ಲಿ ಬಂದು ಹೋಗುವ ಬ್ರಿಟನ್ನಿನ ಎರಡು ಮುಖ್ಯ ಆಚರಣೆಗಳಾದ ಹ್ಯಾಲೋವೀನ್ ಮತ್ತು ಬೊನ್‌ಫೈರ್ ದಿನಗಳು ತಮ್ಮ ತಮ್ಮ ಹಿಂದಿರುವ ಇತಿಹಾಸ ಪುರಾಣಗಳನ್ನು ನೆನಪಿಸುವ ಜೊತೆಗೆ ಬ್ರಿಟನ್ನಿನ ಹಳೆಬೇರು ಹೊಸಚಿಗುರುಗಳ ನಡುವಿನ ಸಂಘರ್ಷದ ಬಗೆಗೂ ತಿಳಿಸುತ್ತಿವೆ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್