Advertisement

ಪಠಾಣ್‌ ಸಿನಿಮಾ: ಕೇಸರಿ ಬಿಕಿನಿ ದೃಶ್ಯಗಳಿಗೆ‌ ಅನುಮೋದನೆ ನೀಡಿದ ಸಿಬಿಎಫ್ ಸಿ

07:53 PM Jan 06, 2023 | Team Udayavani |

ಮುಂಬೈ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಪಠಾಣ್‌ ಸಿನಿಮಾದ ಬೇಷರಂ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಿಕಿನಿ ದೃಶ್ಯಗಳಿಗೆ‌ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ ಸಿ ) ಅನುಮೋದನೆ ನೀಡಿದೆ.

Advertisement

ಬೇಷರಂ ರಂಗ್‌ ಹಾಡಿನಲ್ಲಿ ನಟಿ ಕೇಸರಿ ಬಿಕಿನಿ ಧರಿಸಿದ್ದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದಲ್ಲದೇ, ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿಯ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಹಲವು ಸಂಘ-ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ,ಸಿಬಿಎಫ್ ಸಿ ಹಾಗೂ ಅದರ ಅಧ್ಯಕ್ಷರಾದ ಪ್ರಸೂನ್‌ ಜೋಶಿ ಕೇಸರಿ ಬಿಕಿನಿ ದೃಶ್ಯಗಳಿಗೆ ಅನುಮೋದನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಚಿತ್ರತಂಡ ಹಾಡನ್ನೇ ಸಿನಿಮಾದಿಂದ ತೆಗೆದುಹಾಕುವ ಬಗ್ಗೆಯೂ ಗಂಭೀರ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next